

ಅರಸೀಕೆರೆ: ತಾಲೂಕಿನ ಬೆಂಡೇಕೆರೆ ಗ್ರಾಮ ಹೊರವಲಯದಲ್ಲಿರುವ ಶ್ರೀ ಓರಗಲ್ ತಿಮ್ಮಪ್ಪ ಸ್ವಾಮಿ ಸನ್ನಿಧಿಯಲ್ಲಿ ಜ.10ರಂದು ವೈಕುಂಠ ಏಕಾದಶಿ ಹಮ್ಮಿಕೊಳ್ಳಲಾಗಿದೆ. ಸಂಪ್ರದಾಯದಂತೆ ಬೆಳಗಿನ ಜಾವ ಹೋಮ, ಹವನ ಸೇರಿದಂತೆ ಧಾರ್ಮಿಕ ವಿಧಾನಗಳು ಜರುಗಲಿವೆ. ಭಕ್ತರ ಅನುಕೂಲಕ್ಕಾಗಿ ಪಾರ್ಕಿಂಗ್, ಸರತಿ ಸಾಲು, ಪ್ರಸಾದ ವಿತರಣೆ ಒಳಗೊಂಡಂತೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿಕ್ಕೂರು,ಹಿರಿಯೂರು, ಕಾನಿಹಳ್ಳಿ, ಹರಿಹರಪುರ, ಭೈರಗೊಂಡನಹಳ್ಳಿ, ಒಲುವನಹಳ್ಳಿ, ಕುರುವಂಕ ಸುತ್ತಮುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಪಾಲ್ಗೊಳ್ಳಲಿದ್ದಾರೆ ಎಂದು ಮುಖಂಡ ಚಿಕ್ಕೂರು ಅಶೋಕ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.