

ಹುನಗುಂದ : ತೂರಮರಿ ಗ್ರಾಮದ ಆರಾಧ್ಯ ದೈವ ಮಳೇಂದ್ರ ಸ್ವಾಮಿಗಳ ಮಹಾ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ೆ. 28ರಂದು ನಡೆಯಲಿದೆ.
ಬೆಳಗ್ಗೆ ಮಳೇಂದ್ರ ಸ್ವಾಮೀಜಿ ಗದ್ದುಗೆಗೆ ಮಹಾ ರುದ್ರಾರಾಭಿಷೇಕ ಹಾಗೂ ಬಿಲ್ವಾರ್ಚನೆಯನ್ನು ಲಿಂಗಸೂರಿನ ಜಗದೀಶಯ್ಯ ಶಾಸೀ ವಿಭೂತಿಮಠ ನೆರವೇರಿಸುವರು ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.
ಮಳೇಂದ್ರಸ್ವಾಮಿ ರಥೋತ್ಸವಕ್ಕೆ ಘಟ್ಟಿಗನೂರ ಗ್ರಾಮದಿಂದ ಕಲಶ, ಮಲಗಿಹಾಳದಿಂದ ನಿಶಾನೆ, ಬೂದಿಹಾಳ ಎಸ್.ಕೆ. ಗ್ರಾಮದಿಂದ ಬಾಳೆ ಕಂಬ, ತೆಂಗಿನ ಗರಿ, ತಳಿರು ತೋರಣ ಹಾಗೂ ಹೇಮವಾಡಗಿ ಗ್ರಾಮದಿಂದ ರುದ್ರಾಕ್ಷಿ ಮಾಲೆ ತರಲಾಗುವುದು. ಪಲ್ಲಕ್ಕಿ ಉತ್ಸವ ನಂತರ ಸಂಜೆ 5.30ಕ್ಕೆ ರಥೋತ್ಸವ ನಡೆಯಲಿದೆ.
ಅಜಲಪುರದ ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು, ರಾಜಗುರು ರಾಜೇಂದ್ರ ಒಡೆಯರ, ಸಜ್ಜಲಗುಡ್ಡದ ಅಡವಿಹಾಳದ ದೊಡ್ಡಬಸವಾರ್ಯ ತಾತನವರು, ತೂರಮರಿಯ ಮಳೇಂದ್ರಸ್ವಾಮಿ ಸ್ವಾಮಿಗಳು ಸಾನ್ನಿಧ್ಯ ವಹಿಸುವರು.
ಬಾಗಲಕೋಟೆಯ ಸಂಸದ ಪಿ.ಸಿ. ಗದ್ದಿಗೌಡರ ಉದ್ಘಾಟಿಸಲಿದ್ದು, ಕರ್ನಾಟಕ ವೀರಶೈವ ಲಿಂಗಾಯತ ನಿಗಮದ ಅಧ್ಯಕ್ಷ, ಶಾಸಕ ವಿಜಯಾನಂದ ಕಾಶಪ್ಪನವವರ ಅಧ್ಯಕ್ಷತೆ ವಹಿಸುವರು. ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಕಾರ್ಯಕ್ರಮದ ಜ್ಯೋತಿ ಬೆಳಗಿಸಲಿದ್ದಾರೆ. ಎಸ್‌ಆರ್‌ಎನ್‌ಇ ೌಂಡೇಷನ್ ಸಂಸ್ಥಾಪಕ- ಅಧ್ಯಕ್ಷ ಎಸ್. ನವಲಿಹಿರೇಮಠ ಮಾತರ್ಂಡರಾವ ಮಾಧವರಾವ ಆರ್. ದೇಸಾಯಿ, ತೂರಮರಿ ಗ್ರಾಪಂ ಸದಸ್ಯರಾದ ಬಸವರಾಜ ಕೊಡಗಲಿ, ಲಕ್ಷ್ಮೀ ಕನಸಾವಿ ಮತ್ತಿತರರು ಉಪಸ್ಥಿತರಿರುವರು.