

ವಿಜಯಪುರ : ಪರಿಸರ, ಪ್ರಾಚಿನ ಸ್ಮಾರಕಗಳ ಸಂರಣೆ ಹಾಗೂ ಪ್ರವಾಸೋದ್ಯಮ ಕುರಿತ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಗರದಲ್ಲಿ ಡಿ. 22 ರಂದು ನಡೆಯಲಿರುವ ವೃಕ್ಷೋಥಾನ್ ಹೆರಿಟೇಜ್ ರನ್&2024ರಲ್ಲಿ ಪಾಲ್ಗೊಳ್ಳಲು ಹೆಸರು ನೋಂದಾಯಿಸಲು ಡಿ. 7 ರಂದು ಶನಿವಾರ ಕೊನೆಯ ದಿನವಾಗಿದ್ದು, ಆಸಕ್ತರು ಕೂಡಲೇ ತಮ್ಮ ಹೆಸರು ನೋಂದಾಯಿಸಬೇಕು ಎಂದು ಕೋರ್ ಕಮಿಟಿ ನೋಂದಣಿ ವಿಭಾಗದ ಡಾ. ರಾಜು ಯಲಗೊಂಡ ಮತ್ತು ವೀರೇಂದ್ರ ಗುಚ್ಚೆಚ್ಚಿ ತಿಳಿಸಿದ್ದಾರೆ.
ಸಾರ್ವಜನಿಕರ ಒತ್ತಾಯದ ಹಿನ್ನೆಲೆ ಹೆಸರು ನೋಂದಣಿ ಅವಧಿಯನ್ನು ಡಿ. 7 ರವರೆಗೆ ವಿಸ್ತರಿಸಿತ್ತು. ಈಗಾಗಲೇ, ನೋಂದಣಿ ಕಾರ್ಯ ಭರದಿಂದ ಸಾಗಿದ್ದು, ದೇಶದ ವಿವಿಧ ಭಾಗಗಳ ಸಾವಿರಾರು ಓಟಗಾರರು ತಮ್ಮ ಹೆಸರು ನೋಂದಾಯಿಸಿದ್ದಾರೆ.
ಈ ಬಾರಿಯ ಹೆರಿಟೇಜ್ ರನ್ಗೆ ಸುಮಾರು 15 ರಿಂದ 20 ಸಾವಿರ ಜನ ಪಾಲ್ಗೋಳ್ಳುವ ನಿರೀೆಯಿದೆ. ಓಟದಲ್ಲಿ ಪಾಲ್ಗೋಳ್ಳಲು ಹಲವು ಸಂ, ಸಂಸ್ಥೆಗಳು ಗ್ರೂಪ್ ರೆಜಿಸ್ಟ್ರೆಷನ್ ಕೂಡ ಮಾಡಿಸಿದ್ದು, ಆಸಕ್ತರು ಆನಲೈನ್ ಮೂಲಕ https://www.eventzalley.com/event-details/211 ಕ್ಕೆ ಭೇಟಿ ನೀಡಿ ಹೆಸರು ನೋಂದಾಯಿಸಬಹುದು. ಅಲ್ಲದೆ, ನೋಂದಣಿ ಸಂಬಂಧಿತ ಮಾಹಿತಿಗಾಗಿ ಮೊ. 8095190218 ಮತ್ತು 9886668498 ಕ್ಕೆ ಸಂಪರ್ಕಿಸುವಂತೆ ಡಾ. ರಾಜು ಯಲಗೊಂಡ ಮತ್ತು ವೀರೇಂದ್ರಗುಚ್ಚೆಟ್ಟಿ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.