ಇಂದು ನಾಡಗೀತೆಯ ಶತಮಾನದ ಸಂಭ್ರಮ

01_11_2025_BGR_RURAL_PAGE_2
ದೊಡ್ಡಬಳ್ಳಾಪುರದ ಭಗತ್​ ಸಿಂಗ್​ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪೂರ್ವ ಸಿದ್ಧತಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ನಾಡಗೀತೆ ಹಾಡಿದರು. ಕಸಾಪ ಅಧ್ಯಕ್ಷ ಗೋವಿಂದರಾಜು, ಕಸಬಾ ಘಟಕದ ಕೋಶಾಧ್ಯಕ್ಷ, ಜಿ.ಸುರೇಶ್​, ಪ್ರತಿನಿಧಿ ನಾಗರತ್ನಮ್ಮ, ಭಾರತ್​ ಸ್ಕೌಟ್ಸ್​ ಮತ್ತು ಗೈಡ್​ ಜಿಲ್ಲಾ ಸಹಾಯಕ ಆಯುಕ್ತ ವೆಂಕಟರಾಜು ಇದ್ದರು.
Published on

ದೊಡ್ಡಬಳ್ಳಾಪುರ: ಕುವೆಂಪು ರಚಿಸಿದ ನಾಡಗೀತೆಗೆ ನೂರು ವರ್ಷ ತುಂಬಿದ ಸಂಭ್ರಮವನ್ನು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನ.1ರಂದು ಡಾ.ರಾಜ್​ ಕುಮಾರ್​ ಪ್ರತಿಮೆ ಮುಂದೆ ನಡೆಯುವ ಕನ್ನಡ ರಾಜ್ಯೋತ್ಸವದಲ್ಲಿ ದೊಡ್ಡಬಳ್ಳಾಪುರದ ವಿವಿಧ ಶಾಲೆಗಳ ಸಾವಿರ ವಿದ್ಯಾರ್ಥಿಗಳು ನಾಡಗೀತೆ ಹಾಡುವ ಮೂಲಕ ಆಚರಿಸಲಿದ್ದಾರೆ. ಕುವೆಂಪು ಅವರು 1924&-25ರಲ್ಲಿ ಕನ್ನಡ ರಾಷ್ಟ್ರಗೀತೆ ಎಂದು ನಾಡಗೀತೆ ಬರೆದಿದ್ದರು. 2004ರಲ್ಲಿ ಕುವೆಂಪು ಜನ್ಮ ಶತಮಾನೋತ್ಸವದ ಸಮಯದಲ್ಲಿ ಕರ್ನಾಟಕ ಸರ್ಕಾರ ಈ ಗೀತೆಯನ್ನು ಅಧಿಕೃತ ನಾಡ ಗೀತೆಯನ್ನಾಗಿ ಗೌರವಿಸಿ ವಿಶೇಷ ಸ್ಥಾನ ನೀಡಿತು. ಶಾಲೆಗಳಲ್ಲಿ ಪ್ರತಿದಿನ ತರಗತಿ ಪ್ರಾರಂಭವಾಗುವ ಮೊದಲು ಮತ್ತು ಎಲ್ಲ ಕಾರ್ಯಕ್ರಮಗಳಲ್ಲಿಯೂ ನಾಡಗೀತೆ ಹಾಡಬೇಕು ಎಂದು ನಿರ್ದೇಶಿಸಿತು. ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಾಗರಾಜು, ಸಂಗೀತ ಶಿಕ್ಷಕ ನಾಗರಾಜ್​, ಶಾಂತಮ್ಮ, ಹಣಬೆ ನಾಗರಾಜ್​, ವಿವಿಧ ಶಾಲೆಗಳ ಶಿಕ್ಷಕರಾದ ಡಾ.ಅಶ್ವಿನಿ, ಆನಂದಮ್ಮ, ಜಮುನಾ, ವೆಂಕಟೇಶ್​, ತ್ರಿವೇಣಿ, ನಾರಾಯಣಸ್ವಾಮಿ, ಶಿವಪ್ರಸಾದ್​, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net