ಇಂದು ಶೂರ್ಪಾಲಿ ಲಕ್ಷ್ಮೀನರಸಿಂಹ ರಥೋತ್ಸವ

Today is Surpali Lakshminarasimha Rathotsava
ಲಕ್ಷ್ಮೀನರಸಿಂಹ ದೇವರು
Published on

ತುಬಚಿ: ಲಕ್ಷ್ಮೀನರಸಿಂಹ ದೇವರ ಜಯಂತಿ ಅಂಗವಾಗಿ ಶೂರ್ಪಾಲಿ ಗ್ರಾಮದಲ್ಲಿ ಮೇ 12ರಂದು ಲಕ್ಷ್ಮೀನರಸಿಂಹ ದೇವರಿಗೆ ಬೆಳಗ್ಗೆ ಪಂಚಾಮೃತ ಅಭಿಷೇಕ, ಭವ್ಯ ಅಲಂಕಾರ, 8 ಗಂಟೆಗೆ ಹೋಮ ವಾಹನೋತ್ಸವ ನಡೆಯಲಿದೆ.

ಅಂದು ಜಾತ್ರೆ ನಿಮಿತ್ತ ಗ್ರಾಮದಲ್ಲಿ ವಿವಿಧ ಸ್ಪರ್ಧೆ ಹಮ್ಮಿಕೊಳ್ಳಲಾಗಿದ್ದು, ಬಾಗಲಕೋಟೆ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಅವರ ಸಹಯೋಗದಲ್ಲಿ ಶೂರ್ಪಾಲಿ ಕಬಡ್ಡಿ ಪಂದ್ಯಾವಳಿ ಜರುಗಲಿದೆ. ಮಧ್ಯಾಹ್ನ 12 ಗಂಟೆಗೆ ರಥೋತ್ಸವ ಜರುಗುವುದು. ನಂತರ ತೀರ್ಥಪ್ರಸಾದ ಇರುತ್ತದೆ. ರಾತ್ರಿ 10.30ಕ್ಕೆ ಬಸವೇಶ್ವರ ನಾಟ್ಯ ಸಂಘದಿಂದ ‘ಪತಿವೃತ ಹೆಣ್ಣಿಗೆ ಪಾಪದ ಗಂಡ’ ನಾಟಕ ಪ್ರದರ್ಶನಗೊಳ್ಳಲಿದೆ.

ಮೇ 13 ರಂದು ಗೋಪಾಳಕಾವಲಿ, ಮೇ 14ರಂದು ಅರ್ಚಕರ ಮನೆಗೆ ದೇವರು ಬರುವುದು ಹಾಗೂ ಕ್ಷೇತ್ರದಲ್ಲಿ ಬಣ್ಣ ಆಡಲಾಗುವುದು ಎಂದು ದೇವಾಲಯದ ಪ್ರಧಾನ ಅರ್ಚಕ ಪ್ರಹ್ಲಾದ ಕುಲಕರ್ಣಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net