

ವಿಜಯಪುರ: ಶತಮಾನದ ಸಂತ ಶ್ರೀ ಸಿದ್ಧೇಶ್ವರ ಮಹಾಸ್ವಾಮೀಜಿಗಳ ಗುರುನಮನ ಮಹೋತ್ಸವ ಡಿ. 25 ರಿಂದ ಜ. 2 ರವರೆಗೆ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ನಡೆಯಲಿದೆ.
ಈ ಜ್ಞಾನಯಜ್ಞಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ತಿಳಿಸಿದರು.
ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಎಂದರೆ ಅದೊಂದು ಾನದ ಯವಿದ್ದಂತೆ. ಒಂಬತ್ತು ದಿನ ನಡೆಯಲಿರುವ ಈ ಮಹೋನ್ನತ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಭಾಗವಹಿಸಿ ಜ್ಞಾನಾಮೃತವನ್ನು ಸ್ವೀಕರಿಸಬೇಕು. ಸಿದ್ಧೇಶ್ವರ ಶ್ರೀಗಳ ಪ್ರವಚನಗಳ ಸಾರವನ್ನು ಎಲ್ಲರಿಗೂ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಹರ್ಷಾನಂದ ಮಹಾಸ್ವಾಮೀಜಿ ಮಾತನಾಡಿ, ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವ ಅಂಗವಾಗಿ 9 ದಿನ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಹಲವು ವಿಷಯಗಳ ಕುರಿತು ಚಿಂತನ&ಮಂಥನ ನಡೆಯಲಿದೆ ಎಂದರು.
ಹಿರಿಯ ಪತ್ರಕರ್ತ ವಾಸುದೇವ ಹೆರಕಲ್ಲ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಹಾಗೂ ಕಾನಿಪ ಸಂದ ಜಿಲ್ಲಾಧ್ಯ ಸಂಗಮೇಶ ಚೂರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.
ಜ್ಞಾನ ಹಂಚಿದ ಗುರುವಿಗೆ ದೀಪ ನಮನ: ಜ್ಞಾನ, ಅಧ್ಯಾತ್ಮದ ದಿವ್ಯ ಬೆಳಕು ತೋರಿದ ಲಿಂ. ಸಿದ್ಧೇಶ್ವರ ಶ್ರೀಗಳಿಗೆ ದೀಪ ನಮನ ಸಲ್ಲಿಸುವ ವಿಶೇಷ ಕಾರ್ಯಕ್ರಮ ಜ. 1 ರಂದು ನಡೆಯಲಿದ್ದು, ಮಂಡ್ಯದಲ್ಲಿ ನಡೆದ 87ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯ ಸಾಹಿತಿ ಗೊ.ರು. ಚನ್ನಬಸಪ್ಪ ಉಪನ್ಯಾಸ ನೀಡಲಿದ್ದಾರೆ. ಅಂದು ಆಶ್ರಮದಲ್ಲಿ ಲಾಂತರ ದೀಪಗಳನ್ನು ಬೆಳಗಿಸಿ ದೀಪ ನಮನ ಸಲ್ಲಿಸುವ ಕಾರ್ಯಕ್ರಮ ನಡೆಯಲಿದೆ.
ಜ. 2 ರಂದು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳಿಗೆ ಪುಷ್ಪ ನಮನ ಸಲ್ಲಿಸಲಾಗುವುದು. ರಾಜ್ಯದ ವಿವಿಧ ಭಾಗಗಳಿಂದ ಸಂತ&ಮಹಾತ್ಮರು, ಮಠಾಧೀಶರು, ಗಣ್ಯರು ಭಾಗವಹಿಸುವರು.
ಜ್ಞಾನಯೋಗಾಶ್ರಮದಲ್ಲಿ ಜ್ಞಾನಯಜ್ಞ : ನಗರದ ಜ್ಞಾನಯೋಗಾಶ್ರಮದಲ್ಲಿ ಡಿ. 25 ರಂದು ವಿವಿಧ ಕಾರ್ಯಕ್ರಮಗಳು ಆರಂಭಗೊಳ್ಳಲಿವೆ. ಡಿ. 25 ರಂದು ಸುಧಾರಿತ ಕೃಷಿ ಕುರಿತಾದ ಗೋಷ್ಠಿ ನಡೆಯಲಿದ್ದು, ಧಾರವಾಡ ಕೃಷಿ ವಿವಿ ಕುಲಪತಿ ಡಾ. ಪಿ.ಎಲ್. ಪಾಟೀಲ ಹಾಗೂ ಎ.ಎಸ್. ಆನಂದ ವಿಶೇಷ ಉಪನ್ಯಾಸ ನೀಡುವರು. ಡಿ. 26 ರಂದು ಜ್ಞಾನಾರಾಧನೆ ಎಂಬ ವಿದ್ಯಾರ್ಥಿಗಳಿಗಾಗಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮಹೇಶ ಮಾಶ್ಯಾಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಡಿ. 27 ರಂದು "ಗ್ರಾಮ ಸಂಸತಿ' ಎಂಬ ವಿಚಾರ ಗೋಷ್ಠಿ ನಡೆಯಲಿದ್ದು, ಜಾನಪದ ಸಾಹಿತಿ ಸಿದ್ದಪ್ಪ ಬಿದರಿ ಗ್ರಾಮೀಣ ಬದುಕಿನ ಸೊಗಡು, ಆಚಾರ&ವಿಚಾರಗಳ ಭವ್ಯ ಸಂಸತಿಯನ್ನು ಪ್ರತಿಬಿಂಬಿಸುವ ಕಾರ್ಯ ಮಾಡಲಿದ್ದಾರೆ. ಡಿ. 28 ರಂದು "ಯೋಗ ಜೀವನ' ಎಂಬ ವಿಷಯದ ಕುರಿತು ವಿಚಾರ ಗೋಷ್ಠಿ ಹಮ್ಮಿಕೊಳ್ಳಲಾಗಿದ್ದು, ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರ ಜೀವನ ಆಧಾರಿತ ಉಪನ್ಯಾಸವನ್ನು ಉಪ ಕುಲಪತಿ ಎಸ್. ವ್ಯಾಸ, ಡಾ. ಎಚ್.ಆರ್. ನಾಗೇಂದ್ರಜಿ ಹಾಗೂ ಡಾ. ಪ್ರಶಾಂತ ಕಡಕೋಳ ನೀಡುವರು. ಡಿ. 29 ರಂದು "ಮಾತೃಭಕ್ತಿ' ಎಂಬ ವಿಷಯದ ಕುರಿತ ಉಪನ್ಯಾಸ ಕಾರ್ಯಕ್ರಮ ಡಾ. ವಿಜಯಲಕ್ಷಿ$್ಮ ಬಾಳೆಕುಂದ್ರಿ ನೇತೃತ್ವದಲ್ಲಿ ನಡೆಯಲಿದೆ. ಡಿ. 30 ರಂದು "ಜಾಗತಿಕ ತತ್ವ ಚಿಂತನೆಗಳು' ವಿಷಯದ ವಿಶೇಷ ಉಪನ್ಯಾಸದಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೃಷ್ಣ ದೀತ್ ಕಾರ್ಯಕ್ರಮದ ನೇತೃತ್ವ ವಹಿಸುವರು. ಡಿ. 31 ರಂದು "ಸೇವಾ ಭಾವ' ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಬೆಸ್ಕಾಂ ಅಧಿಕಾರಿ ಮಹಾಂತೇಶ ಬೀಳಗಿ ಉಪನ್ಯಾಸ ನೀಡುವರು.