

ರಾಜ್ಯದ ಆಡಳಿತ ರಂಗದಲ್ಲಿ ತಮ್ಮದೇ ಆದ ಛಾಪೊತ್ತಿದವರು ರಾಮಕೃಷ್ಣ ಹೆಗಡೆ. ಎಸ್.ನಿಜಲಿಂಗಪ್ಪ ಬೆಂಬಲಿಗರಾಗಿ, ಉತ್ತರಾಧಿಕಾರಿಯಾಗಿ ಗುರುತಿಸಿಕೊಂಡ ಹೆಗಡೆ ವಿವಿಧ ಖಾತೆಗಳ ಸಚಿವರಾಗಿ ಗಮನಾರ್ಹ ಸಾಧನೆ ಮಾಡಿದವರು. ರಾಜ್ಯದ ಮುಖ್ಯಮಂತ್ರಿಯಾಗಿ ಅಭಿವೃದ್ಧಿಗೆ ಶ್ರಮಿಸಿದರು. ಕೇಂದ್ರ ವಾಣಿಜ್ಯ ಸಚಿವರಾಗಿದ್ದರು. ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿದ್ದರು. ಮುಖ್ಯಮಂತ್ರಿಯಾಗಿದ್ದಾಗ ಆರೋಪಗಳು ಬಂದಾಗ ಅಧಿಕಾರಕ್ಕೆ ಅಂಟಿ ಕೂರದೇ ರಾಜೀನಾಮೆ ನೀಡಿದ ವಿಶಿಷ್ಟ ವ್ಯಕ್ತಿ. ಹೆಗಡೆ ಒಡನಾಡಿಗಳು ಅವರ ಜತೆಗಿನ ನೆನಪುಗಳನ್ನು ಮೆಲುಕು ಹಾಕಿದ್ದಾರೆ.
ತಂದೆಗಿಂತ ಹೆಚ್ಚು...
| ರಮೇಶ್ ಜಿಗಜಿಣಗಿ ಮಾಜಿ ಸಚಿವ ಹಾಗೂ ಸಂಸದ
ಅವರ ಸಂಪುಟದಲ್ಲಿ ನಾನು ಸಮಾಜ ಕಲ್ಯಾಣ ಮಂತ್ರಿಯಾಗಿದ್ದೆ. ಒಮ್ಮೆ ಇಲಾಖೆಗೆ ಸಂಬಂಧಿಸಿದಂತೆ ಯಾವುದೋ ಸಮಸ್ಯೆಗೆ ಪರಿಹಾರ ಕೇಳಲು ಅವರ ಮನೆಗೆ ಹೋದೆ. ಅಲ್ಲಿ ಜೆ.ಎಚ್. ಪಟೇಲರೂ ಇದ್ದರು. ಇಲಾಖೆಯ ಸಮಸ್ಯೆಯನ್ನು ಅವರ ಮುಂದಿಡುತ್ತಿದ್ದಂತೆ "ರಮೇಶ ಅದನ್ನು ನೀನೆ ಪರಿಹಾರ ಮಾಡು' ಎಂದರು. ನಾನು ಪರಿಹಾರ ಹೇಳುತ್ತಿದ್ದಂತೆ ಅದರಲ್ಲಿ ತಿದ್ದಿ ಪ್ರೋತ್ಸಾಹ ನೀಡಿದರು. ಆಗ ಅವರು ಹೇಳಿದ ಮಾತು, "ರಮೇಶ ಯಾವತ್ತೂ ಹಣ ಹಾಗೂ ಅಧಿಕಾರಕ್ಕೆ ಜೋತು ಬೀಳಬೇಡ. ಅದು ಬಿಸಿಲುಗುದುರೆ ಇದ್ದಂತೆ. ನೀನು ಅದರ ಹಿಂದೆ ಓಡಿದಷ್ಟು ಅದು ಓಡುತ್ತಿರುತ್ತದೆ ಹೊರತು ಕೈಗೆ ಸಿಗುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೋ, ನಿನಗೆ ಏನು ಸಿಗಬೇಕೋ ಅದು ಸಿಕ್ಕಿಯೇ ಸಿಗುತ್ತದೆ'. ಆ ಮಾತು ನನ್ನ ಪ್ರತಿಯೊಂದು ಬೆಳವಣಿಗೆಯಲ್ಲಿಯೂ ಸಾಯಾಗಿದೆ.
ಮುಖ್ಯಮಂತ್ರಿಯಾಗಿದ್ದ ಅವರು ರಾಜೀನಾಮೆ ನೀಡುವ ಸನ್ನಿವೇಶ ಸೃಷ್ಟಿಯಾಗಿತ್ತು. ಅವರು ರಾಜಭವನಕ್ಕೆ ಹೊರಟಾಗ ನಾನು ಮತ್ತು ರುಪತಿ ಜತೆಯಲ್ಲಿಯೇ ಇದ್ದೇವು. ರಾಜೀನಾಮೆ ಸುದ್ದಿ ತಿಳಿದೇ ನನಗೆ ದು@ಖ ತಡೆಯಲು ಆಗಿರಲಿಲ್ಲ. ಬೆಳಗ್ಗೆಯಿಂದ ಅವರ ಮನೆಯಲ್ಲಿಯೇ ಜತೆಯಲ್ಲಿದ್ದೆ. ರಾಜಭವನದ ಹತ್ತಿರ ಬಂದಾಗ ಅವರು ಸಮಯ ಕೇಳಿದರು. ರಾಜ್ಯಪಾಲರು ಕೊಟ್ಟ ಸಮಯಕ್ಕೆ ಇನ್ನೂ ಅರ್ಧ ಗಂಟೆ ಬಾಕಿ ಇತ್ತು. ತಮ್ಮ ಚಾಲಕ ಜಾನಕಿಗೆ ಕಾರನ್ನು ಇಂದಿರಾ ಗಾಂಧಿ ಮ್ಯೂಸಿಕ್ ಪೌಂಡೇನ್ ಇರುವ ಪಾರ್ಕ್ಗೆ ತಿರುಗಿಸುವಂತೆ ಹೇಳಿದರು. ಚಾಲಕನನ್ನು ಇಳಿಸಿದ ನಂತರ ನನ್ನನ್ನು ಉದ್ದೇಶಿಸಿ, "ಸಾರ್ವಜನಿಕ ಜೀವನದಲ್ಲಿ ನಡತೆ ಈಗ ಹೇಗಿದೆಯೋ ಕೊನೆಯ ತನಕ ಅದೇ ರೀತಿ ಇರಬೇಕು. ನೀನು ಜೀವನದಲ್ಲಿ ಉನ್ನತ ಹುದ್ದೆಗೆ ಏರುವುದನ್ನು ನಾನು ನೋಡಬೇಕು. ಯಾವುದೇ ಕಾರಣಕ್ಕೂ ಭಾವಪರವಶವಾಗಬಾರದು' ಎಂದರು.
ನಾನು ಕೇಂದ್ರ ಮಂತ್ರಿಯಾದಾಗ ಅವರ ನೆನಪಿನ ಕಾರ್ಯ ಇತ್ತು. ಅಲ್ಲಿ ನಮ್ಮ ಹಳೆಯ ಬಳಗವೆಲ್ಲ ಇತ್ತು. ನನಗೆ ಮಾತೇ ಹೊರಡಲಿಲ್ಲ. ಕೈ ಮುಗಿದು ಕುಳಿತುಕೊಂಡು ಬಿಟ್ಟೆ. ನನಗೆ ನಡೆಯುವ ಹಾದಿ ತೋರಿಸಿದವರು ಹೆಗಡೆ ಮತ್ತು ಪಟೇಲ್. ನನ್ನ ಮಕ್ಕಳು ಹೆಚ್ಚು ಓದದೇ ಕೃಷಿಯತ್ತ ಆಸಕ್ತಿ ತೋರಿಸಿದಾಗ ಅವರನ್ನು ಹೆಗಡೆ ಬಳಿಗೆ ಕರೆದುಕೊಂಡು ಹೋಗಿದ್ದೆ. ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅದೇ ಕ್ಷೇತ್ರದಲ್ಲಿ ಮುಂದುವರಿಯಲಿ ಎಂಬ ಸಲಹೆ ನೀಡಿದರು. ಈಗ ಮಕ್ಕಳು ಉತ್ತಮ ಕೃಷಿಕರಾಗಿದ್ದಾರೆ. ನನ್ನ ಮನೆಗೂ "ರಾಮಕೃಷ್ಣ ಹೆಗಡೆ' ಮತ್ತು "ಜೆ.ಎಚ್. ಪಟೇಲ್ ನಿವಾಸ' ಎಂದೇ ಹೆಸರಿಟ್ಟಿದ್ದೇನೆ. ಅವರಿಬ್ಬರು ಸದಾ ನನ್ನ ಹೃದಯದಲ್ಲಿದ್ದಾರೆ.
ನೈಜ ಪ್ರಜಾಪ್ರಭುತ್ವವಾದಿ
| ಎಚ್. ಏಕಾಂತಯ್ಯ ಮಾಜಿ ಸಚಿವ
ಆಗ ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಮಧ್ಯಪ್ರವೇಶ ಮಾಡಿದರು. ಹೆಗಡೆಯವರು ನನ್ನನ್ನು ಕರೆದು "ಏಕಾಂತಯ್ಯ ಕ್ಷಮೆ ಇರಲಿ, ಇಂತಹ ಟನೆ ಮರುಕಳಿಸಲ್ಲ' ಎಂದು ಹೇಳಿ ರಾಜೀನಾಮೆ ಹಿಂಪಡೆಯುವಂತೆ ಸೂಚಿಸಿದರು. ಆನಂತರ ಯಾವತ್ತೂ ಅವರು ನನ್ನ ಇಲಾಖೆಯಲ್ಲಿ ಅನಗತ್ಯ ಮಧ್ಯಪ್ರವೇಶ ಮಾಡಲಿಲ್ಲ. ಅವರು ಯಾರನ್ನೂ ದ್ವೇಷ ಮಾಡಿದವರಲ್ಲ. ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುತ್ತಿದ್ದರು. ಕೊನೆಯ ತನಕವೂ ನನ್ನೊಂದಿಗೆ ವಿಶ್ವಾಸದಿಂದ ಇದ್ದರು. ಇತ್ತೀಚಿನ ಸರ್ಕಾರಗಳನ್ನು ನೋಡಿದಾಗ ಹೆಗಡೆ ಆಡಳಿತ ಬಹುವಾಗಿ ಕಾಡುತ್ತದೆ.
ದೂರದೃಷ್ಟಿಯ ನಾಯಕ
| ಡಾ. ಎಂ.ಪಿ. ನಾಡಗೌಡ. ವಿಧಾನ ಪರಿಷತ್ ಮಾಜಿ ಸದಸ್ಯ
ಸ್ಥಳಿಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತಂದಿದ್ದು ಹೆಗಡೆ. ಆಗ ಮಹಿಳೆಯರ ಚಾರಿತ್ರ್ಯ ಹಾಳಾಗುತ್ತದೆ ಎಂದು ಕೆಲವರು ಹುಯಿಲೆಬ್ಬಿಸಿದರು. ಆಗ ಹೆಗಡೆ ಅಷ್ಟೇ ತೀಕ್ಷ್ಣವಾಗಿ "ಚಾರಿತ್ರ್ಯ ಎಂಬುದು ಮಹಿಳೆಯರಿಗೆ ಮಾತ್ರ ಇದೆಯಾ, ಪುರುಷರಿಗೆ ಇಲ್ಲವಾ' ಎಂದು ಎಲ್ಲರ ಬಾಯಿ ಮುಚ್ಚಿಸಿದರು. ಬಹಳಷ್ಟು ಯುವಕರನ್ನು ಗುರುತಿಸಿ ರಾಜಕೀಯಕ್ಕೆ ಕರೆತಂದರು. ಇವತ್ತು ಬೇರೆ ಬೇರೆ ಪಕ್ಷಗಳಲ್ಲಿ ಮುಂಚೂಣಿಯಲ್ಲಿ ಇರುವ ಬಹುತೇಕರು ಹೆಗಡೆಯವರು ಗುರುತಿಸಿದ ನಾಯಕರೇ ಆಗಿದ್ದಾರೆ. ಬಾಗಲಕೋಟೆಯ ನವನಗರ ನಿರ್ಮಾಣ, ಕೂಡಲ ಸಂಗಮ ಅಭಿವೃದ್ಧಿ, ಜಿಲ್ಲೆಗಳ ಪುನರ್ವಿಂಗಡಣೆಗೆ ಹುಂಡೇಕರ್ ಸಮಿತಿ ರಚನೆ. ಅಲ್ಪಸಂಖ್ಯಾತರ ಶಿಕ್ಷಣಕ್ಕೆ ಮೆಡಿಕಲ್ ಮತ್ತು ಇಂಜಿನಿಯರಿಂಗ್ ಕಾಲೇಜು, ಹಳ್ಳಿ ಮಕ್ಕಳು ಮಧ್ಯದಲ್ಲಿ ಶಾಲೆ ತೊರೆಯುವುದು ತಪ್ಪಿಸಲು ಬಸ್ಪಾಸ್ ವ್ಯವಸ್ಥೆ& ಹೀಗೆ ಅವರು ರೂಪಿಸಿದ ನೂರಾರು ಕಾರ್ಯಕ್ರಮಗಳನ್ನು ಗುರುತಿಸಬಹುದು.
ಅವರದು ಬಹಳ ಸೂಕ್ಷ$್ಮ ವ್ಯಕ್ತಿತ್ವ. ಒಮ್ಮೆ ಅವರೊಂದಿಗೆ ಚುನಾವಣಾ ಪ್ರಚಾರಕ್ಕೆ ಹೈದರಾಬಾದ್ಗೆ ಹೋದೆವು. ಅಲ್ಲಿ ನಾನು ನನ್ನ ಸ್ನೇಹಿತನ ಮನೆಗೆ ಹೊರಟಾಗ, ಹೆಗಡೆ ಬಿಡದೆ ಜತೆಯಲ್ಲಿಯೇ ಉಳಿಸಿಕೊಂಡರು. ಬೆಳಗ್ಗೆ, "ಮಲ್ಲಣ್ಣ ಚಿಲ್ಲರೆ ಬೇಕು' ಎಂದು ಕೇಳಿದರು. ನಾನು ಕೊಟ್ಟಾಗ ಆ ಮೊತ್ತದ ಹಣವನ್ನು ನೀಡಿದರು. ಅವರು ಚಿಲ್ಲರೆ ಪಡೆದಿದ್ದು ಲ್ಟ್ಿನವರಿಗೆ, ಚಾಲಕರಿಗೆ, ರೂಂ ಬಾಯ್ಗೆ ಟಿಪ್ಸ್ ನೀಡುವ ಸಲುವಾಗಿ. ಅವರು ವಿಮಾನದಲ್ಲಿ ಯಾವತ್ತೂ ಎಕಾನಮಿ ಕ್ಲಾಸ್ನಲ್ಲಿಯೇ ಪ್ರಯಾಣ ಮಾಡುತ್ತಿದ್ದರು. ತಮ್ಮ ಬ್ಯಾಗನ್ನು ಬೇರೆಯವರಿಗೆ ಹಿಡಿದುಕೊಳ್ಳಲು ಕೊಡುತ್ತಿರಲಿಲ್ಲ. ಅಷ್ಟು ಸರಳ ನಡೆಯವರಾಗಿದ್ದರು.
ನಾನು 1984ರ ಲೋಕಸಭಾ ಚುನಾವಣೆಯಲ್ಲಿ ಸೋತಾಗ ರಾಜ್ಯಸಭೆ ಟಿಕೆಟ್ ಕೊಡುವಂತೆ ಕೇಳಿದ್ದೆ, ಆಗ ಅವರು "ಮಲ್ಲಣ್ಣ ನಾವು ನಮಗಾಗಿ ಒಂದು ಕ್ಷೇತ್ರ ಗುರುತಿಸಿಕೊಳ್ಳಬೇಕು'ಎಂದಿದ್ದರು. ಅದರಂತೆ ನಾನು ಪದವೀಧರರ ಕ್ಷೇತ್ರದಿಂದ ನಾಲ್ಕು ಬಾರಿ ವಿಧಾನ ಪರಿಷತ್ಗೆ ಚುನಾಯಿತನಾಗಿದ್ದೆ. ತಮ್ಮ ಮಕ್ಕಳಿಗೂ ಅವರು ಕ್ಷೇತ್ರ ಗುರುತಿಸಿಕೊಳ್ಳಿ, ಚುನಾವಣೆಗೆ ಬನ್ನಿ, ನನ್ನ ಹೆಸರು ಬಳಸಿಕೊಂಡು ಬರಬೇಡಿ ಎಂದೇ ಹೇಳುತ್ತಿದ್ದರು. ಅವರು ಕುಟುಂಬ ರಾಜಕಾರಣ ಒಪು$್ಪತ್ತಿರಲಿಲ್ಲ.
ಜಾರ್ಜ್ ರ್ನಾಂಡೀಸ್, ಮಧು ದಂಡವತೆ, ವೀರೇಂದ್ರ ಪಾಟೀಲ್ ಅವರೊಂದಿಗೆ ಸೇರಿ ಕೊಂಕಣ ರೈಲ್ವೆ ಯೋಜನೆ ಜಾರಿಗೆ ಕಾರಣರಾದರು. ಅವರು ಮುಖ್ಯಮಂತ್ರಿ ಆಗುವ ಮುನ್ನ ರೈತರಿಗೆ ಲೆವಿ ವ್ಯವಸ್ಥೆ ಇತ್ತು. ಅದನ್ನು ಅವರು ತೆಗೆದುಹಾಕಿ ಉಪಕಾರ ಮಾಡಿದರು.
ಹೆಗಡೆ ಅಧಿಕಾರ ವಿಕೇಂದ್ರೀಕರಣದ ಪರವಾಗಿದ್ದರು. 1000&1500 ಜನರಿಗೆ ಒಬ್ಬ ಪ್ರತಿನಿಧಿ ಇರಬೇಕು, ಅದರಿಂದ ಆಡಳಿತ ಸರಳವಾಗುತ್ತದೆ. ಭ್ರಷ್ಟಾಚಾರವೂ ಕಡಿಮೆ ಆಗುತ್ತದೆ ಎಂದು ಪ್ರತಿಪಾದಿಸುತ್ತಿದ್ದರು. ಅವರ ಬಗ್ಗೆ ದಿನವೆಲ್ಲ ಮಾತನಾಡುವಷ್ಟು ನೆನಪುಗಳಿವೆ...