

ವಿಜಯಪುರ: ನಗರ ಹೊರವಲಯದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿ ಕನ್ನಡ ಅಧ್ಯಯನ ವಿಭಾಗದ ಸಭಾಂಗಣದಲ್ಲಿ ಜ. 20 ರಂದು ಮಧ್ಯಾಹ್ನ 3.30 ಕ್ಕೆ ಪ್ರಥಮ ವರ್ಷದ ವಿದ್ಯಾರ್ಥಿನಿಯರಿಗಾಗಿ ಸ್ವಾಗತ ಕೋರುವ ಪುತ್ರಿಯರ ದಿನ ಸ್ಪಂದನ ಕಾರ್ಯಕ್ರಮ ನಡೆಯಲಿದೆ.
ವಿವಿಯ ವಿದ್ಯಾರ್ಥಿನಿ ೇಮಪಾಲನ ನಿರ್ದೇಶನಾಲಯದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯ ಅತಿಥಿಯಾಗಿ ಕಲಬುರಗಿಯ ಗುಲರ್ಬಗಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಬಿ.ಜಿ. ಮೂಲಿನಮನಿ ಭಾಗವಹಿಸುವರು. ವಿವಿ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಅಧ್ಯಕ್ಷತೆ ವಹಿಸುವರು.
ಕುಲಸಚಿವ ಶಂಕರಗೌಡ ಸೋಮನಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ಎಚ್.ಎಂ. ಚಂದ್ರಶೇಖರ ಮತ್ತಿತರರು ಉಪಸ್ಥಿತಿ ವಹಿಸುವರು ಎಂದು ವಿದ್ಯಾರ್ಥಿನಿ ೇಮಪಾಲನಾ ನಿರ್ದೇಶನಾಲಯದ ನಿರ್ದೇಶಕಿ ಪ್ರೊ. ಶಾಂತಾದೇವಿ.ಟಿ., ಸಹಾಯಕ ನಿರ್ದೇಶಕಿ ಡಾ. ಅಶ್ವಿನಿ.ಕೆ.ಎನ್. ಪ್ರಕಟಣೆೆಯಲ್ಲಿ ತಿಳಿಸಿದ್ದಾರೆ.