ಇಂದು ದೇವಿ ಶರನ್ನವರಾತ್ರಿ ಪ್ರಾರಂಭ

21KKNR-01
ಕುಕನೂರಿನ ಆರಾದ್ಯ ದೈವ ಮಹಾಮಾಯಾ ದೇವಿ
Published on

ಕುಕನೂರು: ಪಟ್ಟಣದ ಐತಿಹಾಸಿಕ ಆರಾಧ್ಯ ದೈವ ಮಹಾಮಾಯಾ ದೇವಿ ಶರನ್ನನವರಾತ್ರಿ ಪೂಜಾ ಕಾರ್ಯಗಳು ಸೆ.22ರಿಂದ ಪ್ರಾರಂಭಗೊಳ್ಳುತ್ತಿದ್ದು, ವಿಜಯದಶಮಿಯ ನಿಮಿತ್ತ ನಿತ್ಯ ದೇವಿಗೆ ಕಾಕಡಾರತಿ, ಅಭಿಷೇಕ, ಕುಂಕುಮಾರ್ಚನೆ, ಅಲಂಕಾರ ಪೂಜಾ, ವಾಹನೋತ್ಸವ, ಮಂತ್ರಪುಷ್ಪ, ಅಷ್ಟಾವಧಾನ ಸೇವಾ, ಮಹಾಮಂಗಳಾರತಿ ನಡೆಯಲಿದೆ.

ಸೆ.22ರ ಸೋಮವಾರ ಗರುಡಫಟ, ಧ್ವಜಾರೋಹಣದೊಂದಿಗೆ ನವರಾತ್ರಿ ಉತ್ಸವ ಪ್ರಾರಂಭವಾಗುವುದು. ಘಟಸ್ಥಾಪನಾ, ಗಣಹೋಮ, ಪುಷ್ಪಯಾನ ಪೂಜಾ ಕಾರ್ಯ ಜರುಗಲಿದೆ. ಸೆ.23ರಂದು ಮಹಾಪೂಜೆ ಮಯೂರ ಯಾನ ಅಲಂಕಾರ, ಸೆ.24ರಂದು ಮಹಾಪೂಜೆ, ಹಂಸಯಾನ, ಸೆ.25ರಂದು ಸಪ್ತರಾತ್ರಾರಂಭ,

ಶೇಷಯಾನ, ಸೆ.26ರಂದು ಉಪಾಂಗ ಲಲಿತಾ ವೃತ, ಮಹಾಪೂಜೆ, ಚಂಡಿಯಾಗ, ಶೇಷಯಾನ, ಸೆ.27ರಂದು ಮಹಾಪೂಜೆ, ಶ್ರೀ ಲಕ್ಷ್ಮೀ ವೇಂಕಟೇಶ್ವರ ಕಲ್ಯಾಣೋತ್ಸವ, ಸಿಂಹಯಾನ, ಸೆ.28ರಂದು ಮಹಾಪೂಜೆ, ವೃಷಭಯಾನ, ಸೆ.29ರಂದು ಸರಸ್ವತಿ ಆಹ್ವಾನ,

ಅಶ್ವಯಾನ, ಸೆ.30ರಂದು ಶಸ್ತ್ರಪೂಜೆ, ಸರಸ್ವತಿಯಾಗ, ಗಜಯಾನ ಹಾಗೂ ಅ.1ರಂದು ಮಧ್ಯಾಹ್ನ 4ಗಂಟೆ ಶ್ರೀ ಮಹಾಮಾಯಾ ಮಹಾರಥೋತ್ಸವ, ಮನ್ವಾದಿ, ಖಂಡೆಪೂಜೆ, ರಥಯಾನ, ಅ.2ರಂದು ಘಟವಿಸರ್ಜನೆ, ಅವಮೃತ ಸ್ನಾನ, ಶ್ರೀ ಲಕ್ಷ್ಮೀವೆಂಕಟೇಶ್ವರ ರಥೋತ್ಸವ, ಶ್ರೀದೇವಿ ಸಿಮೋಲಂಘನ ಬನ್ನಿ ಮುಡಿಯುವುದು ನಡೆಯಲಿದೆ ಎಂದು ಧರ್ಮಾಧಿಕಾರಿಗಳಾದ ವಲ್ಲಭರಾವ ದೇಸಾಯಿ, ಬಂಡೆರಾಯಗೌಡ ದೇಸಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net