ಇಂದು ಭಾವ ಬಣ್ಣದ ಚಿತ್ರಸಂತೆ

chithra sante jan 05 2020
Published on

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ತು ಕುಮಾರ ಕೃಪಾ ರಸ್ತೆಯಲ್ಲಿ ಆಯೋಜಿಸಿರುವ 17ನೇ ಚಿತ್ರಸಂತೆಗೆ ಭಾನುವಾರ (ಜ.5) ಆರಂಭಗೊಳ್ಳಲಿದೆ. ಈ ಬಾರಿಯ ಚಿತ್ರಸಂತೆ ‘ನೇಗಿಲಯೋಗಿ ರೈತರಿಗೆ’ ಸಮರ್ಪಣೆಗೊಳ್ಳುತ್ತಿದೆ.

ಮುಖ್ಯಮಂತ್ರಿ ಯಡಿಯೂರಪ್ಪ ಬೆಳಗ್ಗೆ 10.30ಕ್ಕೆ ಚಿತ್ರಸಂತೆಗೆ ಚಾಲನೆ ನೀಡಲಿದ್ದಾರೆ. ಹೊರರಾಜ್ಯದ ಕಲಾವಿದರಿಗೆ ಪರಿಷತ್ ವತಿಯಿಂದ ಊಟ ಮತ್ತು ವಸತಿ ವ್ಯವಸ್ಥೆ ಮಾಡಲಾಗಿದೆ.

ರೈತಗೀತೆಯಲ್ಲಿನ ‘ನೇಗಿಲ ಕುಳದೊಳಡಗಿದೆ ಕರ್ಮ, ನೇಗಿಲ ಮೇಲೆಯೇ ನಿಂತಿದೆ ಧರ್ಮ’ ಎಂಬ ವಾಕ್ಯ ಚಿತ್ರಸಂತೆಯ ಧ್ಯೇಯವಾಕ್ಯವಾಗಿದೆ. ಕಾರ್ಯಕ್ರಮದ ಮುಖ್ಯ ವೇದಿಕೆಯನ್ನು ಎತ್ತಿನಗಾಡಿ ಮಾದರಿಯಲ್ಲಿ ನಿರ್ವಿುಸಲಾಗಿದೆ. ನೇಗಿಲ ಬೃಹತ್ ಪ್ರತಿಕೃತಿ ಪ್ರದರ್ಶಿಸಲಾಗಿದೆ. ಜಲವರ್ಣ, ತೈಲವರ್ಣ ಚಿತ್ರಗಳು, ಶಿಲ್ಪಕಲೆ ಸೇರಿ ಹಲವು ಪ್ರಕಾರದ ಚಿತ್ರಕಲೆಗಳು ಪ್ರದರ್ಶನಗೊಳ್ಳುತ್ತಿವೆ. ಗಾಂಧಿಭವನ, ಕ್ರೆಸೆಂಟ್ ರಸ್ತೆ, ಚಿತ್ರಕಲಾ ಪರಿಷತ್ ರಸ್ತೆಗಳಲ್ಲಿ 20 ಸಾವಿರಕ್ಕೂ ಹೆಚ್ಚಿನ ಕಲಾಕೃತಿಗಳು ಪ್ರದರ್ಶನಗೊಳ್ಳಲಿವೆ. ರಾತ್ರಿ 8ರವರೆಗೆ ಪ್ರದರ್ಶನವಿರಲಿದೆ.

ಪ್ರವಾಸೋದ್ಯಮದಿಂದ ಲ್ಯಾಂಡ್​ಸ್ಕೇಪ್: ಪ್ರವಾಸೋದ್ಯಮ ಇಲಾಖೆ ಇದೇ ಮೊದಲ ಬಾರಿಗೆ ಚಿತ್ರಸಂತೆಯ ಸಹಭಾಗಿತ್ವ ವಹಿಸಿದೆ. ಎಲ್ಲ 30 ಜಿಲ್ಲೆಗಳಲ್ಲಿನ ಪ್ರಮುಖ ಪ್ರವಾಸಿ ತಾಣದ ಪರಿಚಯ ಕೈಪಿಡಿ ಸಿದ್ಧಪಡಿಸಿದ್ದು, ಅದನ್ನು ಪ್ರದರ್ಶಿಸಲಿದೆ.

ಕೃಷಿ ಪರಿಕರಗಳ ಪ್ರದರ್ಶನ

ಚಿತ್ರಸಂತೆಯನ್ನು ರೈತರಿಗೆ ಸಮರ್ಪಿಸುತ್ತಿರುವ ಹಿನ್ನೆಲೆಯಲ್ಲಿ ಪರಿಷತ್ತಿನ ಗಾಂಧಿ ಕುಟೀರದಲ್ಲಿ ರೈತರು ಬಳಸುವ ವಸ್ತುಗಳು, ಉಡುಗೆ ಮತ್ತು ಕೃಷಿ ಪರಿಕರಗಳನ್ನು ಪ್ರದರ್ಶಿಸಲಾಗುತ್ತಿದೆ. ಹಳೇ ಮೈಸೂರು ಭಾಗ, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದಲ್ಲಿ ಬಳಸುವ ವಸ್ತುಗಳನ್ನು ಸಂಗ್ರಹಿಸಿ ಪ್ರದರ್ಶನಕ್ಕಿಡಲಾಗಿದೆ.

ಪ್ರಿಲ್​ನಲ್ಲಿ ಭಾರತೀಯ ಕಲಾ ಮೇಳ

ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಏ.24ರಿಂದ 26ರವರೆಗೆ ನಡೆಯುವ ‘ಭಾರತೀಯ ಕಲಾ ಮೇಳ’ ಆಯೋಜಿಸಲಾಗುತ್ತಿದೆ. ದೇಶದ ಆಯ್ದ 300 ರಿಂದ 400 ಕಲಾವಿದರು ಪಾಲ್ಗೊಳ್ಳಲಿದ್ದಾರೆ.

ಚಿತ್ರಸಂತೆ ವಿಶೇಷತೆ

100 ರೂ.ನಿಂದ ಲಕ್ಷಾಂತರ ರೂ. ಬೆಲೆಯ ಕಲಾಕೃತಿ ಮಾರಾಟ ಸಂತೆ ನಡೆಯುವ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಆಂಬುಲೆನ್ಸ್ ಗಳ ನಿಯೋಜನೆ ಕಾರ್ಡ್ ಮೂಲಕ ಹಣ ಪಾವತಿ ವ್ಯವಸ್ಥೆ ಹಾಗೂ ಎಸ್​ಬಿಐ, ಕೆನರಾ ಬ್ಯಾಂಕ್​ಗಳಿಂದ ಎಟಿಎಂ ವ್ಯವಸ್ಥೆ ಭಾರತೀಯ ಸೇವಾದಳದ ಆವರಣ, ಕ್ರೆಸೆಂಟ್ ಮತ್ತು ರೇಸ್​ಕೋರ್ಸ್ ರಸ್ತೆಗಳಲ್ಲಿ ವಾಹನ ನಿಲುಗಡೆ ವ್ಯವಸ್ಥೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net