

ಗದಗ: ಜಿಲ್ಲಾ ಸಮೀಕ್ಷಣಾಧಿಕಾರಿ ಡಾ.ವೆಂಕಟೇಶ ರಾಥೋಡ್ ಇವರ ಮಾರ್ಗದರ್ಶನದಲ್ಲಿ ನವೆಂಬರ್ ತಿಂಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ದಳ ಹಾಗೂ ತಾಲೂಕಾ ತಂಬಾಕು ನಿಯಂತ್ರಣ ತನಿಖಾ ದಳ ಗದಗ, ನಗರದ ತಿಲಕ ಪಾರ್ಕ ಹಳೆ ಬಸ್ ನಿಲ್ದಾಣ ಹಾಗೂ ಬೆಟಗೇರಿ ನಗರದ ಕುರಹಟ್ಟಿಪೆಟೆಯಲ್ಲಿ ಕೋಟ್ಪಾ ದಾಳಿ ಹಮ್ಮಿಕೊಳ್ಳಲಾಯಿತು.
ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮ ಹಾಗೂ ತಂಬಾಕು ನಿಯಂತ್ರಣ ಕಾಯ್ದೆ ಕೋಟ್ಪಾ-2003ರ ಕುರಿತು ಸಾರ್ವಜನಿಕರಲ್ಲಿ ಹಾಗೂ ಅಂಗಡಿಕಾರರಲ್ಲಿ ಜಾಗೃತಿ ಮೂಡಿಸಲಾಯಿತು, ತಂಬಾಕು ಮುಕ್ತ ಯುವ ಪಿಳಿಗೆ ಮಾಡುವ ನಿಟ್ಟಿನಲ್ಲಿ ಶಾಲಾಕಾಲೇಜು ಆವರಣದಿಂದ 100 ಗಜದ ವರೆಗೆ ತಂಬಾಕು ಮಾರಾಟ ನಿಷೇಧ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧದ ಕುರಿತು ಪ್ರತಿಯೊಂದು ಸಾರ್ವಜನಿಕ ಸ್ಥಳಗಳಲ್ಲಿ ನಾಮಫಲಕ ಬಿತ್ತರಿಸುವದು ಅ ಸ್ಥಳದ ಮಾಲೀಕರ ಜಾವಾಬ್ದಾರಿಯಾಗಿರುತ್ತದೆ. ಕೆಲವು ವಸತಿ ಪ್ರದೇಶದಲ್ಲಿ ಧೂಮಪಾನ ಅಡ್ಡಾಗಳನ್ನು ಮಾಡಿಕೊಂಡಿರುವವರ ವಿರುದ್ಧ ಕೂಡಾ ಕ್ರಮ ವಹಿಸಲಾಯಿತು. ತಂಬಾಕು ಕುರಿತ ಜಾಹಿರಾತು ನಿಷೇದಿಸುವದು, 18 ವರ್ಷದೊಳಗಿನವರಿಗೆ ತಂಬಾಕು ನಿಷೇಧಿಸುವದು. ತಂಬಾಕು ಉತ್ಪನ್ನಗಳ ಪ್ಯಾಕ್ ಮೇಲೆ ಶೇ 85% ರಷ್ಟು ಅರೋಗ್ಯ ಎಚ್ಚರಿಕೆ ಚಿನ್ಹೆ ಕಡ್ಡಾಯ ಈ ಕುರಿತು ಮಾಹಿತಿ ಹಾಗೂ ಜಾಗೃತಿ ಮೂಡಿಸಿ ಉಲ್ಲಂಘನೆ ಮಾಡಿದವರ ವಿರುದ್ಧ ಎಚ್ಚರಿಕೆ ನೀಡಿ ಒಟ್ಟು 16 ಪ್ರಕರಣ ದಾಖಲಿಸಿ ರೂ. 2900/- ದಂಡ ಸಂಗ್ರಹಿಸಲಾಯಿತು. ತಂಬಾಕು ಉತ್ಪನ್ನಗಳ ಮಾರಾಟ ಹಾಗೂ ಅದರ ಉಪಯೋಗ ಕೋಟ್ಪಾ ಕಾಯ್ದೆ ಅಡಿಯಲ್ಲಿ ಅವಕಾಶವಿದ್ದು ಅದನ್ನು ಉಲ್ಲಂಘಿಸಿದಲ್ಲಿ ಕಾನೂನು ರೀತಿ ಕ್ರಮ ವಹಿಸಲಾಗುವದು.
ಈ ದಾಳಿಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರರಾದ ಗೋಪಾಲ ಸುರಪುರ, ಪೊಲೀಸ್ ಇಲಾಖೆಯ ಹೆಚ್.ಕೆ.ಪಾಟೀಲ ಪಿ.ಎಸ್.ಐ. ಸೋಮಶೇಖರ್.ಪಿ.ಸಿ. ಬಂಡಿವಡ್ಡರ್. ಪಿ.ಸಿ. ಆರೋಗ್ಯ ಇಲಾಖೆಯ ವೈ.ಎನ್.ಕಡೆಮನಿ ಹಾಗೂ ಎನ್.ಸಿ.ಜೋಶಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು.