ತಂಬಾಕು ಉತ್ಪನ್ನ ಸಂಪೂರ್ಣ ನಿಷೇಧಿಸಲಿ

9Manju5-web
ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ಬುಧವಾರ ವಿಶ್ವ ಬಾಯಿ ಆರೋಗ್ಯ ದಿನ ಕಾರ್ಯಕ್ರಮವನ್ನು ಡಾ.ಪ್ರೀತಿ ದೊಡವಾಡ ಉದ್ಘಾಟಿಸಿದರು. ಡಾ.ಶಿವಯೋಗಿ ಹೂಗಾರ, ಡಾ.ಸೋನಾಲ್ ಜೋಷಿ, ಡಾ.ವಿನಾಯಕ ಕುಂಬೋಜಕರ್, ಡಾ.ಅಲ್ಕಾ ಕಾಳೆ ಇತರರಿದ್ದರು.
Published on

ಬೆಳಗಾವಿ: ಪ್ರಸ್ತುತ ಬಹಳಷ್ಟು ಜನತೆ ತಂಬಾಕಿನಂತಹ ದುಶ್ಚಟಗಳಿಗೆ ಮತ್ತು ಜಂಕ್ ುಡ್‌ಗಳಿಗಳಿಗೆ ಮಾರುಹೋಗಿ ಮಾರಣಾಂತಿಕ ರೋಗಗಳಿಗೆ ಆಹ್ವಾನ ನೀಡಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ತಂಬಾಕು ಉತ್ಪನ್ನ ಸಂಪೂರ್ಣ ನಿಷೇಧಿಸಬೇಕು ಎಂದು ಕೆಎಲ್‌ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಅಲ್ಕಾ ಕಾಳೆ ಹೇಳಿದರು. ನಗರದ ಕೆಎಲ್‌ಇ ಸಂಸ್ಥೆಯ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದ ವಸಡು ರೋಗ ವಿಭಾಗದಲ್ಲಿ ಕೆಎಲ್‌ಇ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಹಾಗೂ ವಸಡು ರೋಗಶಾಸ ವೈದ್ಯರ ಸಂಘದ ಸಂಸ್ಥಾಪಕ ಡಾ.ಜಿ.ಬಿ.ಶಂಕವಾಳಕರ್
ಜನ್ಮದಿನದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಬಾಯಿ ಸ್ವಚ್ಛತಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇಹದ ಆರೋಗ್ಯ ಕಾಪಾಡುವಲ್ಲಿ ಬಾಯಿ ಆರೋಗ್ಯ ಪ್ರಮುಖ ಪಾತ್ರ ವಹಿಸುತ್ತದೆ. ಆಹಾರ ಸರಿಯಾಗಿ ಜಗಿದು ಸೇವಿಸಿದಲ್ಲಿ ದೇಹದ ಆರೋಗ್ಯ ಕಾಪಾಡಬಹುದು. ಆ ನಿಟ್ಟಿನಲ್ಲಿ ಆ.31ರ ವರೆಗೆ ಬಾಯಿ (ಹಲ್ಲು) ಸ್ವಚ್ಛತಾ ಚಿಕಿತ್ಸೆ ಉಚಿತವಾಗಿ ನೀಡುವುದಾಗಿ ತಿಳಿಸಿದರು. ಕೆಎಲ್‌ಇ ಸಂಸ್ಥೆಯ ಅಜೀವ ಸದಸ್ಯೆ ಹಾಗೂ ಪ್ರಾಧ್ಯಾಪಕಿ ಡಾ.ಪ್ರೀತಿ ದೊಡವಾಡ, ಡಾ.ಶಿವಯೋಗಿ ಹೂಗಾರ, ಡೀನ್ ಡಾ.ಸೋನಾಲ್ ಜೋಶಿ, ಡಾ.ವಿನಾಯಕ ಕುಂಬೋಜಕರ್, ಡಾ.ಶೃತಿ ಕರವೇಕರ, ಡಾ.ವಿಲಾಸ್ ಪತ್ತಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net