ತಂಬಾಕು ಉತ್ಪನ್ನ ಮಾರಾಟ ಮಳಿಗೆಗಳ ಮೇಲೆ ದಾಳಿ

Tobacco Product, Raid, Muddebihala, Panashop, Tobacco Control Cell, Taluk Tobacco Investigation Squad, Taluk Health Officer,
ಮುದ್ದೇಬಿಹಾಳ ಪಟ್ಟಣದ ಪಾನಶಾಪ್ ಅಂಗಡಿಯೊಂದರ ಮುಂಭಾಗ ತಂಬಾಕು ನಿಯಂತ್ರಣ ಕುರಿತ ಪೋಸ್ಟರ್ ಅಳವಡಿಸಲಾಯಿತು. ಡಾ.ಸತೀಶ ತಿವಾರಿ, ಯಲ್ಲಪ್ಪ ಚಲವಾದಿ, ಎಂ.ಎಸ್. ಗೌಡರ, ಅಮರೇಶ ಸಾಲಿ, ಆರ್.ಎಸ್. ಸಜ್ಜನ ಇತರರಿದ್ದರು.
Published on

ಮುದ್ದೇಬಿಹಾಳ: ಪಟ್ಟಣದಲ್ಲಿ ತಂಬಾಕು ಹಾಗೂ ತಂಬಾಕು ಉತ್ಪನ್ನ ಮಾರುವ ಪಾನಶಾಪ್ ಸೇರಿ ಇನ್ನಿತರ ಅಂಗಡಿಗಳ ಮೇಲೆ ತಂಬಾಕು ನಿಯಂತ್ರಣ ಕೋಶ, ತಾಲೂಕು ತಂಬಾಕು ತನಿಖಾ ದಳ ತಂಡ ಶುಕ್ರವಾರ ಜಂಟಿ ದಾಳಿ ನಡೆಸಿ 11 ಪ್ರಕರಣ ದಾಖಲಿಸಿಕೊಂಡು, 2100 ರೂ. ದಂಡ ವಿಧಿಸಿದೆ.

ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ.ಸತೀಶ ತಿವಾರಿ ನೇತೃತ್ವದಲ್ಲಿ ಕೋಟ್ಪಾ- 2003 ಕಾಯ್ದೆ ಅಡಿ ಪಟ್ಟಣದ ಬಸವೇಶ್ವರ ವೃತ್ತದಿಂದ ಆಲಮಟ್ಟಿ ರೋಡ್‌ವರೆಗೆ, ಮೇನ್ ಬಜಾರ್ ಸುತ್ತಮುತ್ತ ಹಾಗೂ ಮಾರ್ಗಮಧ್ಯದಲ್ಲಿನ ಪಾನ್‌ಶಾಪ್ ಹಾಗೂ ಹೋಟೆಲ್ಗಳ ಮೇಲೆ ದಾಳಿ ನಡೆಸಲಾಯಿತು.

ಸಾರ್ವಜನಿಕರಿಗೆ ತಂಬಾಕು ಸೇವನೆಯ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು. ಎಲ್ಲ ಅಂಗಡಿಗಳ ಮುಂದೆ ಸೆಕ್ಷನ್ 4 ಮತ್ತು 6(ಎ) ಗಳನ್ವಯ ಎಚ್ಚರಿಕೆಯ ಸಂದೇಶದ ನಾಮಫಲಕಗಳನ್ನು ಅಳವಡಿಸಲಾಯಿತು.

ತಂಬಾಕು ಉತ್ಪನ್ನಗಳ ಸಂಬಂಧಿಸಿದ ಜಾಹೀರಾತು ಫಲಕಗಳನ್ನು ತೆರವುಗೊಳಿಸಲಾಯಿತು. ದಾಳಿಯಲ್ಲಿ ಪೊಲೀಸ್ ಇಲಾಖೆಯ ಎಎಸೈ ಅಮರೇಶ ಶಾಲಿ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಯಲ್ಲಪ್ಪ ಚಲವಾದಿ, ಎಂ.ಎಸ್. ಗೌಡರ, ಆರ್.ಎಸ್. ಸಜ್ಜನ, ಇಸ್ಮಾಯಿಲ್ ವಾಲಿಕಾರ, ವಿಬಿಡಿ ಮೇಲ್ವಿಚಾರಕ ಎಸ್.ಸಿ. ರುದ್ರವಾಡಿ, ಪ್ರಶಾಂತ ಕಡಿ, ಪುರಸಭೆ ಸಿಬ್ಬಂದಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net