ತಂಬಾಕು ಮನುಕುಲದ ಆರೋಗ್ಯಕ್ಕೆ ಮಾರಕ

28 vikram 4
????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ತಂಬಾಕು ಮತ್ತು ಅದರ ವಿಭಿನ್ನ ಉತ್ಪನ್ನಗಳು ಮನುಕುಲದ ಆರೋಗ್ಯಕ್ಕೆ ಮಾರಕವಾಗಿವೆ ಎಂದು ನವನಗರದ ಕರ್ನಾಟಕ ಕ್ಯಾನ್ಸರ್​ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆಯ ಡಾ. ಉಮೇಶ ಹಳ್ಳಿಕೇರಿ ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಅಮ್ಮಿನಬಾವಿ ಪ್ರಾಥಮಿಕ ಆರೋಗ್ಯ ಕೇಂದ್ರ, ನವನಗರದ ಕರ್ನಾಟಕ ಕ್ಯಾನ್ಸರ್​ ಚಿಕಿತ್ಸೆ ಮತ್ತು ಸಂಶೋಧನಾ ಸಂಸ್ಥೆ ಹಾಗೂ ಬೆಂಗಳೂರಿನ ಇಂಡಿಯನ್​ ಕ್ಯಾನ್ಸರ್​ ಸೊಸೈಟಿ ಆಶ್ರಯದಲ್ಲಿ ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಏರ್ಪಡಿಸಿದ್ದ ಕ್ಯಾನ್ಸರ್​ ಅರಿವು ಜಾಗೃತಿ ಮತ್ತು ತಪಾಸಣೆ ಶಿಬಿರದಲ್ಲಿ ಮಾತನಾಡಿದರು.

ತಂಬಾಕು ಸೇವನೆಯಿಂದ ಮನುಷ್ಯನ ದೈಹಿಕ ಆರೋಗ್ಯದ ಹಿನ್ನೆಡೆಯೊಂದಿಗೆ ಕ್ಯಾನ್ಸರ್​ದಂತಹ ರೋಗಗಳಿಗೆ ತುತ್ತಾಗುತ್ತಾರೆ. ಡಾ. ವಿಜಯ ಸಂಕೇಶ್ವರ ಹಾಗೂ ಡಾ. ಆರ್​. ಬಿ. ಪಾಟೀಲ ನೇತೃತ್ವದ ನವನಗರದ ಕ್ಯಾನ್ಸರ್​ ಆಸ್ಪತ್ರೆಯು ಬೆಂಗಳೂರಿನ ಇಂಡಿಯನ್​ ಕ್ಯಾನ್ಸರ್​ ಸೊಸೈಟಿ ಅನುದಾನದಲ್ಲಿ ಜಿಲ್ಲೆಯ ಎಲ್ಲ ಹಳ್ಳಿಗಳಲ್ಲಿ ಕ್ಯಾನ್ಸರ್​ ತಪಾಸಣಾ ಉಚಿತ ಶಿಬಿರ ಹಮ್ಮಿಕೊಳ್ಳುತ್ತಿದೆ. ಕ್ಯಾನ್ಸರ್​ ಚಿಕಿತ್ಸೆಗೆ ಪ್ರಸ್ತುತ ಅತ್ಯಾಧುನಿಕ ಉಪಕರಣಗಳನ್ನು ನವನಗರದ ಕ್ಯಾನ್ಸರ್​ ಆಸ್ಪತ್ರೆ ಹೊಂದಿದೆ ಎಂದರು.

ವೈದ್ಯಾಧಿಕಾರಿ ಡಾ. ಬೀನಾ ಶೂರಪಾಲಿ ಮಾತನಾಡಿದರು. ಶಿಬಿರದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣ, ರಕ್ತದ ಒತ್ತಡ, ಪಿಎಪಿ ಪರೀಕ್ಷೆ, ಮ್ಯಾಮೋಗ್ರಫಿ, 30 ಜನರ ಸ್ತನ ಕ್ಯಾನ್ಸರ್​ ತಪಾಸಣೆ, 25 ಜನರ ಗರ್ಭಕಂಠದ ಕ್ಯಾನ್ಸರ್​ ತಪಾಸಣೆ, 105 ಜನರ ಬಾಯಿ ಕ್ಯಾನ್ಸರ್​ ತಪಾಸಣೆ ನಡೆಸಲಾಯಿತು.

ಆರೋಗ್ಯಾಧಿಕಾರಿ ಡಾ. ಪ್ರಿಯಾಂಕಾ ನಾಯ್ಕ, ಸಂತಾನಿ ದಂಡಿನ, ಮೊಹಮ್ಮದ್​ ಜಬೀರ, ಶಿಲ್ಪಾ ಹೂಲಿಕಟ್ಟಿ, ವೆಂಕಟೇಶ ಲಮಾಣಿ, ಆರೋಗ್ಯ ಇಲಾಖೆ ವಿವಿಧ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net