ಲೋನ್​ ಕೊಡುವ ನೆಪದಲ್ಲಿ 74 ಸಾವಿರ ರೂ. ವಂಚನೆ

Cibra
Published on

ಹಾವೇರಿ: ಮುದ್ರಾ ಯೋಜನೆಯಡಿ ಸಾಲ ಮಂಜೂರು ಆಗಿದ್ದು ಅದ್ನನು ಪಡೆಯಲು ನೋಂದಣಿ, ತೆರಿಗೆ ಸೇರಿ 74 ಸಾವಿರ ರೂ. ನೀಡುವಂತೆ ಹಣ ಪಡೆದುಕೊಂಡು ಮಹಿಳೆಯೊಬ್ಬರಿಗೆ ಮೋಸ ಮಾಡಿರುವ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುಮಿತ್ರಾ ಬಸವಣ್ಣೆಪ್ಪ ಭಜಂತ್ರಿ (50) ಮೋಸ ಹೋದವರು.
ಇವರಿಗೆ ಅಲೋಕ್​ ಎನ್ನುವ ವ್ಯಕ್ತಿ ಕರೆ ಮಾಡಿ ನಿಮಗೆ ಮುದ್ರಾ ಯೋಜನೆಯಡಿ ಲೋನ್​ ಬಂದಿದೆ. ಅದನ್ನು ತೆಗೆದುಕೊಳ್ಳಲು ನೋಂದಣಿ, ತೆರಿಗೆ ಹಾಗೂ ಇನ್ಸೂರೆನ್ಸ್​ ಫೀ ಸೇರಿ 74 ಸಾವಿರ ರೂ. ಕಟ್ಟಬೇಕು ಎಂದು ತಿಳಿಸಿದ್ದಾನೆ. ಇವರು ಹಣ ಹಾಕಿದ ಬಳಿಕ ಆತ ಫೋನ್​ ಸ್ವಿಚ್​ಆಫ್​ ಮಾಡಿ ಹಣ ವಾಪಸ್​ ಕೊಡದೆ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net