ವಚನಸಾಹಿತ್ಯಕ್ಕೆ ಶರಣರ ಕೊಡುಗೆ ಅಪಾರ

1 KOTTUR 01
ಕೊಟ್ಟೂರಿನಲ್ಲಿ ಶರಣ ಸಾಹಿತ್ಯ ಪರಿಷತ್ ದತ್ತಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ದೇವರಮನಿ ಕರಿಯಪ್ಪ, ಎಚ್.ಎಂ. ಹಾಲಯ್ಯ, ಎಂ. ಸುಜಾತ, ದೇವರಮನಿ ಪಿನಾಕಪಾಣಿ, ಅಂಗಡಿ ಚಂದ್ರಣ್ಣ, ಮತ್ತಿಹಳ್ಳಿ ನಾಗರಾಜ ಇತರರಿದ್ದರು.
Published on

ಕೊಟ್ಟೂರು: ಶರಣರು ರಚಿಸಿದ ವಚನಗಳು ಸರ್ವಕಾಲಕ್ಕೂ ಸಲ್ಲುವಂತಹವುಗಳಾಗಿದ್ದು, ಮನಕುಲಕ್ಕೆ ದಾರಿ ದೀಪವಾಗಿವೆ ಎಂದು ಶಿಕ್ಷಕಿ ಕೆ.ಎಸ್. ಸ್ನೇಹಾ ಹೇಳಿದರು.

ಪಟ್ಟಣದ ಭೂತಭುಜಂಗ ಮಠದಲ್ಲಿ ಆಯೋಜಿಸಿದ್ದ ಶರಣ ಸಾಹಿತ್ಯ ಪರಿಷತ್ತಿನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಸೋಮವಾರ ಮಾತನಾಡಿದರು.
ವಚನಸಾಹಿತ್ಯದ ಶ್ರೀಮಂತಿಕೆಗೆ ನೂರಾರು ಶರಣರು ಶ್ರಮಿಸಿದ್ದಾರೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಹೊಂಬಾಳೆ ಮಂಜುನಾಥ ಮಾತನಾಡಿ, ಸುತ್ತೂರು ಜಗದ್ಗುರು ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ದೂರದೃಷ್ಟಿಯಿಂದ ಶರಣ ಸಾಹಿತ್ಯ ಪರಿಷತ್ ಸ್ಥಾಪನೆಯಾಗಿ, ಜನರ ಮನೆ ಮನಗಳಿಗೆ ಶರಣರ ಅನುಭಾವ ವಚನಗಳು ತಲುಪಿದವು ಎಂದರು.

ಪ್ರಮುಖರಾದ ದೇವರಮನಿ ಕರಿಯಪ್ಪ, ಎಚ್.ಎಂ. ಹಾಲಯ್ಯ, ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ. ಸುಜಾತಾ, ದೇವರಮನಿ ಪಿನಾಕಪಾಣಿ, ದೇವರಮನಿ ಕೊಟ್ರೇಶ, ಅಂಗಡಿ ಚಂದ್ರಣ್ಣ, ಮತ್ತಿಹಳ್ಳಿ ನಾಗರಾಜ, ಎಸ್.ಎಂ. ನಳಿನಿ, ಜಿ.ಸಿದ್ದಪ್ಪ, ಬಿ. ಹನುಮಂತಪ್ಪ, ಮಲ್ಲಿಕಾರ್ಜುನ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net