ಮರಕ್ಕೆ ಕಾರು ಡಿಕ್ಕಿಯಾಗಿ ಚಾಲಕ ಸಾವು

Crime Logo
Published on

ಹಾವೇರಿ: ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ನಗರದ ಇಜಾರಿಲಕಮಾಪುರ ಬಳಿ ಮಂಗಳವಾರ ನಡೆದಿದೆ.

ಧಾರವಾಡ ನಗರದ ಸಪ್ತಾಪೂರ ಬಾವಿ ಹತ್ತಿರದ ನಿವಾಸಿ ಭರತ ಪ್ರಕಾಶ ಕಲ್ಯಾಣ ಮೃತ ಕಾರು ಚಾಲಕ.

ಇವರು ಆರ್​ಟಿಒ ಕಚೇರಿ ಕಡೆಯಿಂದ ಹಾವೇರಿ ನಗರಕ್ಕೆ ಬರುತ್ತಿದ್ದ ಸಮಯದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಚಾಲಕ ಭರತ ಸ್ಥಳದಲ್ಲಿಯೆ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಸಂಚಾರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net