ಮೃಗಾಲಯಕ್ಕೆ ಬಂದಿಳಿದ ಮೂರು ಸಿಂಹ

25Imam7_NB-Web
Published on

ಬೆಳಗಾವಿ: ತಾಲೂಕಿನ ಭೂತರಾಮನಹಟ್ಟಿ ಗ್ರಾಮದಲ್ಲಿರುವ ರಾಣಿ ಚನ್ನಮ್ಮ ಮೃಗಾಲಯಕ್ಕೆ ಗುರುವಾರ ನಸುಕಿನ ಜಾವ ಮೂರು ಸಿಂಹ ಗಳು ಬಂದಿಳಿದಿವೆ. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ನಕುಲ, ಕೃಷ್ಣ ಹಾಗೂ ನಿರುಪಮಾ ಹೆಸರಿನ ಸಿಂಹಗಳನ್ನು ಸುರಕ್ಷಿತವಾಗಿ ತರಲಾಗಿದೆ. 2010ರ ೆ.12ರಂದು ಪ್ರೇಕ್ಷಾ-ಗಣೇಶ ಹೆಸರಿನ ಸಿಂಹಕ್ಕೆ ಜನಿಸಿದವುಗಳಾಗಿವೆ. 15 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗುವುದು. ಅವುಗಳ ವರ್ತನೆ ಪರಿಶೀಲಿಸಿ, ನಂತರ ಸಾರ್ವ ಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಶೀಘ್ರ ಹುಲಿ, ಚಿರತೆ, ಕರಡಿಗಳನ್ನು ಮೃಗಾಲಯಕ್ಕೆ ತರಿಸಲು ಪ್ರಯತ್ನ ನಡೆದಿದೆ. ಇದರಿಂದ ಪ್ರವಾಸಿಗರನ್ನು ಮೃಗಾಲಯದತ್ತ ಸೆಳೆಯಲು ಅನುಕೂಲವಾಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net