

ಮಸ್ಕಿ: ಸುಸ್ಥಿರ ಸಮಾಜ ನಿರ್ಮಾಣಕ್ಕೆ ಜನರ ಸಹಕಾರ ಅಗತ್ಯ ಎಂದು ಸೇಡಮ್ ಕೊತ್ತಲ ಬಸವೇಶ್ವರ ಶಿಕ್ಷಣ ಸಮಿತಿ ಅಧ್ಯಕ್ಷ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ಇದನ್ನೂ ಓದಿ: ಕೊತ್ತಲ ಬಸವನ ರಥೋತ್ಸವ ಸಂಭ್ರಮ
ಪಟ್ಟಣದ ಗಚ್ಚಿನ ಹಿರೇಮಠದಲ್ಲಿ ಈಚೇಗೆ ಹಮ್ಮಿಕೊಂಡಿದ್ದ ವಿಕಾಸ ಪಥ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು. ಜಗತ್ತಿಗೆ ಭಾರತ ಜ್ಞಾನ ನೀಡುವ ರಾಷ್ಟ್ರವಾಗಿದೆ. ಭಾರತಕ್ಕೆ ಕಲ್ಯಾಣ ಕರ್ನಾಟಕದಿಂದ ಜ್ಞಾನದ ದಿಶೆ ತೊರಿಸುವ ಕಾರ್ಯಕ್ರಮ 2025 ಜನವರಿ 29ರಿಂದ ಫೆ.6ವರೆಗೆ ಸೇಡಮ್ ಹತ್ತಿರದ ಬೀರನಹಳ್ಳಿಯಲ್ಲಿ 240ಎಕರೆ ಪ್ರದೇಶದಲ್ಲಿ ಜರುಗಲಿದೆ.
ದೇಶದ ಸಾಧಕರ ಸಮಾವೇಶ ನಡೆಯಲಿದ್ದು, ತಾಲೂಕಿನ ಹೆಚ್ಚಿನ ಜನ ಭಾಗವಹಿಸುವಂತೆ ಮನವಿ ಮಾಡಿದರು. ಗಚ್ಚಿನ ಹಿರೇಮಠದ ವರರುದ್ರಮುನಿ ಶಿವಾಚಾರ್ಯ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಮಾತನಾಡಿದರು.
ಪ್ರಮುಖರಾದ ಮಹಾದೇವಪ್ಪಗೌಡ ಪೊಲೀಸ್ ಪಾಟೀಲ್, ಡಾ.ಶಿವಶರಣಪ್ಪ ಇತ್ಲಿ, ಅಂದಾನಪ್ಪ ಗುಂಡಳ್ಳಿ, ಸಿದ್ದಲಿಂಗಯ್ಯ ಗಚ್ಚಿನಮಠ, ಮಲ್ಲಪ್ಪ ಕುಡತಿನಿ, ಪ್ರಕಾಶ ಧಾರಿವಾಲ್, ಮಲ್ಲೇಶಪ್ಪ ಬ್ಯಾಳಿ, ಘನಮಠದಯ್ಯ ಸಾಲಿಮಠ, ಮಹಾಂತೇಶ ಮಸ್ಕಿ, ಎಂ.ಅಮರೇಶ
ಎನ್.ಶಿವಕುಮಾರ, ಆದಯ್ಯ ಸ್ವಾಮಿ ಕ್ಯಾತನಹಟ್ಟಿ, ಲಕ್ಷ್ಮೀನಾರಯಣ ಶಟ್ಟಿ, ಅಶೋಕ ಠಾಕೂರು, ಶರಣಯ್ಯ ಸೊಪ್ಪಿಮಠ, ಚನ್ನಪ್ಪ ಬ್ಯಾಳಿ, ಕೃಷ್ಣ ಚಿಗರಿ, ಚಂದ್ರಕಲಾ ದೇಶಮುಖ, ಶಿವಲೀಲಾ ಗಚ್ಚಿನಮಠ, ವಿದ್ಯಾಶ್ರೀ ಇತರರಿದ್ದರು.