

ಕಂಪ್ಲಿ: ರಾಜ್ಯದ ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸುವಲ್ಲಿ ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಇಲ್ಲಿನ ಗಂಗಾಮತ ಸಂಘದ ತಾಲೂಕು ಅಧ್ಯಕ್ಷ ಎಲಿಗಾರ ನಾಗರಾಜ ಒತ್ತಾಯಿಸಿದರು.
ಕೋಟೆಯ ಅಂಬಿಗರ ಚೌಡಯ್ಯ ವೃತ್ತದಲ್ಲಿ ಭಾನುವಾರ ಗಂಗಾ ಜಯಂತ್ಯುತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ಕಳೆದ ಮೂರು ದಶಕಗಳಿಂದ ಗಂಗಾಮತಸ್ಥರನ್ನು ಎಸ್ಟಿಗೆ ಸೇರಿಸುವ ಹೋರಾಟ ನಡೆದಿದೆ. ನಾನಾ ಕ್ಷೇತ್ರಗಳಲ್ಲಿ ಗಂಗಾಮತಸ್ಥರು ಹಿಂದುಳಿದಿದ್ದು ಎಸ್ಟಿಗೆ ಸೇರಿಸಬೇಕು. ಪಟ್ಟಣದಲ್ಲಿ ಗಂಗಾಮತಸ್ಥರ ಸಮುದಾಯ ಭವನ, ಕಲ್ಯಾಣ ಮಂಟಪ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕಿದೆ. ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ಜೆ.ಎನ್.ಗಣೇಶ್ ನೀಡಿದ ಭರವಸೆಯಂತೆ ಒಂದು ಕೋಟಿ ರೂ. ಅನುದಾನ ನೀಡಬೇಕು. ಗಂಗಾಮತಸ್ಥ ವಿದ್ಯಾರ್ಥಿಗಳಿಗಾಗಿ ಸರ್ಕಾರ ಹಾಸ್ಟೆಲ್ ತೆರೆಯಬೇಕು ಎಂದು ಒತ್ತಾಯಿಸಿದರು.
ಗಂಗಾಪರಮೇಶ್ವರಿ ಭಾವಚಿತ್ರ ಮೆರವಣಿಗೆಯಲ್ಲಿ ಶಾಸಕ ಜೆ.ಎನ್.ಗಣೇಶ್, ಅಂಬಿಗರ ಚೌಡಯ್ಯ ಸಂಘದ ಅಧ್ಯಕ್ಷ ಕೆ.ಪ್ರಕಾಶ್, ಪ್ರಮುಖರಾದ ಅಯ್ಯೋದಿ ವೆಂಕಟೇಶ್, ಬಿ.ಸಿದ್ದಪ್ಪ, ಕೆ.ಮನೋಹರ, ಯು.ಹನುಮಂತಪ್ಪ, ಎಸ್.ಸುರೇಶ್, ಯು.ವಿರುಪಣ್ಣ, ಜೆ.ಈರಪ್ಪ, ಕೆ.ಬಿ.ವೀರಭದ್ರಪ್ಪ, ಬಿ.ಈರಪ್ಪ, ನಡವಿ ಮಲ್ಲಿಕಾರ್ಜುನ, ಯು.ವೆಂಕಟೇಶ, ಎ.ತಾಯಣ್ಣ, ನೇಣ್ಕಿ ಗಿರಿ, ವೈ.ಉಮೇಶ್, ಇಟಗಿ ವಿರೂಪಾಕ್ಷಿ, ಕಟ್ಟೆ ದುರುಗಪ್ಪ, ಟಿ.ಗಂಗಣ್ಣ, ಯು.ಪರಮೇಶಿ, ಚಿದಾನಂದ ಇತರರಿದ್ದರು.