ಬರೋಬ್ಬರಿ 29.10 ಲಕ್ಷ ರೂ. ವಂಚಿಸಿದ ಸೈಬರ್​ ಖದೀಮರು

Cibra
Published on

ಹಾವೇರಿ: ಎಸ್​ಬಿಐ ಸೆಕ್ಯೂರಿಟಿಸ್​ ಟ್ರೇಡಿಂಗ್​ ಆಪ್​ನಲ್ಲಿ ಹೂಡಿಕೆ ಮಾಡಿದರೆ ಶೇ. 10ರಿಂದ 150ರ ರವರೆಗೂ ಲಾಭ ಬರಲಿದೆ ಎಂದು ನಂಬಿಸಿ ವ್ಯಾಪಾರಿಯೊಬ್ಬರಿಗೆ 29.10 ಲಕ್ಷ ರೂ. ವಂಚಿಸಿದ ಕುರಿತು ಇಲ್ಲಿಯ ಸೈಬರ್​ ಕೆಂ ಪೊಲೀಸ್​ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.
ಸತೀಶ ಚಿಕ್ಕಮಠ (48) ಎಂಬುವರಿಗೆ ಮೋಸ ಮಾಡಿರುವುದು.
ಇವರಿಗೆ ಅಪರಿಚಿತ ವ್ಯಕ್ತಿ ಫೋನ್​ ಮಾಡಿ ಎಸ್​ಬಿಐ ಸೆಕ್ಯೂರಿಟಿಸ್​ ಆಪ್​ನಲ್ಲಿ ಹೂಡಿಕೆ ಮಾಡಿದರೆ ನೀವು ಹೂಡಿಕೆ ಮಾಡಿದ ಹಣಕ್ಕೆ ಶೇ. 10ರಿಂದ ಶೇ. 150ರ ವರೆಗೂ ಲಾಭಾಂಶ ಬರಲಿದೆ ಎಂದು ನಂಬಿಸಿದ್ದಾರೆ. ನಂತರ ಸತೀಶ ಅವರ ಕಡೆಯಿಂದ 29.10 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ್ದಾನೆ ಎನ್ನಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net