ಮೋಳಿಗೆ ಮಾರಯ್ಯ ಕಾಯಕನಿಷ್ಠ ಶರಣ

29MUDALGI2
Published on

ಮೂಡಲಗಿ: ಬಸವಣ್ಣನವರ ವ್ಯಕ್ತಿತ್ವದಿಂದ ಪ್ರಭಾವಿತರಾದ ಮೋಳಿಗೆ ಮಾರಯ್ಯ ತಮ್ಮ ವಚನಗಳಲ್ಲಿ ಡಂಭಾಚಾರವನ್ನು ಕಟುವಾಗಿ ಟೀಕಿಸಿದ ಕಾಯಕನಿಷ್ಠ ಶರಣ ಎಂದು ಮಕ್ಕಳ ಸಾಹಿತಿ ಸಂಗಮೇಶ ಗುಜಗೊಂಡ ಹೇಳಿದರು.

ತಾಲೂಕಿನ ಅರಬಾವಿಯ ಜಗದ್ಗುರು ದುರದುಂಡೀಶ್ವರ ಮಠದ 19ನೇ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಮೋಳಿಗೆ ಮಾರಯ್ಯ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. ಮಾರಯ್ಯ ಅಂತರಂಗ, ಬಹಿರಂಗದ ಶುದ್ಧತೆಯೇ ಭಕ್ತಿಯ ನಿಜವಾದ ಮಾರ್ಗವೆಂದು ಪ್ರತಿಪಾದಿಸಿದ್ದರು ಎಂದರು.

ಸಾನ್ನಿಧ್ಯ ವಹಿಸಿದ್ದ ಅರಬಾವಿ ಮಠದ ಪೀಠಾಧಿಪತಿ ಗುರುಬಸವಲಿಂಗ ಸ್ವಾಮೀಜಿ ಮಾತನಾಡಿ, ಸತ್ಯ, ಶುದ್ಧ ಕಾಯಕ, ಸದ್ವಿಚಾರಗಳಿಂದ ಬದುಕಿನಿಂದ ಮುಕ್ತಿ ಪಡೆಯಲು ಸಾಧ್ಯ. ಶರಣರ ಸನ್ಮಾರ್ಗದಲ್ಲಿ ನಡೆಯುವುದರ ಮೂಲಕ ಜೀವನದ ಆನಂದ ಪಡೆದುಕೊಳ್ಳಬೇಕು ಎಂದರು.

ಶರಣ ದಂಪತಿ ದಿ.ಚಂಬಕ್ಕ ಮತ್ತು ಈಶ್ವರಪ್ಪ ಸಿದ್ರಾಮಪ್ಪ ನಿಜಗುಲಿ ಸ್ಮರಣೆಯಲ್ಲಿ ಅವರ ಪುತ್ರ ಶಿವಾನಂದ ನಿಜಗುಲಿ ಮಠದ ದಾಸೋಹ ಭವನ ಕಟ್ಟಡಕ್ಕೆ ರೂ.5 ಲ ರೂ. ದೇಣಿಗೆ ನೀಡಿದ ಪ್ರಯುಕ್ತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸವದತ್ತಿಯ ವಲಯ ಅರಣ್ಯಾಧಿಕಾರಿ ಸಂಜೀವ ಸಂವಸುದ್ದಿ, ಕಷಿ ಸಾಧಕ ಲಕ್ಷಿ$್ಮಕಾಂತ ಸೊಲ್ಲಾಪುರ, ಶಿಕ ಅಪ್ಪಾಸಾಹೇಬ ಕುರುಬರ, ವಿ.ಕೆ. ನಾಯ್ಕ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net