

ಮಲ್ಲಮ್ಮನ ಬೆಳವಡಿ: ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ಕಳೆದ 20 ವರ್ಷಗಳಿಂದ ಗುಡಿಸಲ್ಲೇ ವಾಸ ಮಾಡುತ್ತಿದ್ದ ನೀಲಪ್ಪ ಜವಳಿ ಅವರ ಕುಟುಂಬಕ್ಕೆ ಶನಿವಾರ ಪಿಡಿಒ ಆಸ್ೀ ಲತ್ೀ ಪ್ರಧಾನ ಮಂತ್ರಿ ಆವಾಸ ಯೋಜನೆಯಡಿ ವಸತಿ ಮಂಜೂರಾತಿ ಪತ್ರ ನೀಡಿದರು.
ಗುಡಿಸಲು ಮುಕ್ತ ರಾಜ್ಯ ಮಾಡಲು ಸರ್ಕಾರ ವಸತಿ ಯೋಜನೆಗಳನ್ನು ತಂದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾಶಕ್ತಿಯಿಂದ ಕೊರತೆಯಿಂದ ಯಾವುದೇ ವಸತಿ ಯೋಜನೆ ಪ್ರಯೋಜನ ಸಿಗದೆೆ ಕಳೆದ ಎರಡು ದಶಕಗಳಿಂದ ನೀಲಪ್ಪ ಜವಳಿ ಅವರ ಕುಟುಂಬ ಉಡಿಕೇರಿಯಿಂದ 6 ಕಿಮೀ ದೂರದ ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿತ್ತು. ಈ ಬಗ್ಗೆ 2025 ೆಬ್ರವರಿ 25 ರಂದು "20 ವರ್ಷಗಳಿಂದ ಗುಡಿಸಲಲ್ಲೇ ವಾಸ' ಎಂಬ ರ್ಶಿಷಿಕೆಯಡಿ ವಿಜಯವಾಣಿ ವಿಶೇಷ ವರದಿ ಪ್ರಕಟಿಸಿತ್ತು.
ವರದಿಯಿಂದ ಎಚ್ಚೆತ್ತ ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸೌಲಭ್ಯದಿಂದ ವಂಚಿತರಾಗಿದ್ದ ನೀಲಪ್ಪ ಜವಳಿ ಅವರ ಅವರ ಗುಡಿಸಲಿಗೆ ತೆರಳಿ ವಸತಿ ಯೋಜನೆಯಡಿ ವಸತಿ ಮಂಜೂರಾತಿ ಪತ್ರವನ್ನು ಕುಟುಂಬಕ್ಕೆ ಹಸ್ತಾಂತರಿಸಿದರು. ವಿಜಯವಾಣಿ ದಿನಪತ್ರಿಕೆ ಸಾಮಾಜಿಕ ಕಳಕಳಿಗೆ ಜವಳಿ ಕುಟುಂಬ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗ್ರಾಪಂ ಮಾಜಿ ಅಧ್ಯ ಬಸಪ್ಪ ಮಡಿವಾಳರ, ಗ್ರಾಪಂ ಸದಸ್ಯ ನಿಂಗನಗೌಡ ಚಿಕ್ಕನಗೌಡ್ರ, ಉಮೇಶ ಹಿತ್ತಲಮನಿ, ಮಹಾಂತೇಶ ಮಡಿವಾಳರ, ಚಂದ್ರಯ್ಯ ಕುಲಕರ್ಣಿ ಇತರರಿದ್ದರು.