

ನಾಗರಮುನ್ನೋಳಿ: ಗುರು ಪರಂಪರೆಗೆ ಗೌರವ ಸಲ್ಲಿಸಲು ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಸಮಾರಂಭದ ನಡೆ ಶ್ಲಾಘನೀಯ ಎಂದು ನಿಪನಾಳ ಗ್ರಾಮದ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಜಿ.ಬಿ.ಸಂಗಟೆ ಹೇಳಿದರು.
ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 2011-12ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಹಾಗೂ ಹಳೆಯ ವಿದ್ಯಾರ್ಥಿಗಳ ಅಪೂರ್ವ ಸ್ನೇಹ ಸಂಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ನಿವೃತ್ತ ಶಿಕ್ಷಕ ಎನ್.ಎಂ.ಹುಕ್ಕೇರಿ ಮಾತನಾಡಿದರು. ಹಳೆಯ ವಿದ್ಯಾರ್ಥಿ ಹಾಲಪ್ಪ ನಾಗರಾಳೆ, ಮುಖ್ಯಶಿಕ್ಷಕ ಎಂ.ಕೆ.ಖೋತ, ನಿವೃತ್ತ ಶಿಕ್ಷಕರಾದ ಐ.ಜಿ.ಹಾದಿಮನಿ, ಕೆ.ಬಿ.ಮಠದ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ, ರಮಜಾನ್ ಜಮಾದರ, ಶಂಕರ ಕುಂಬಾರ, ವೀರಭದ್ರ ಚೌಗಲಾ, ತೇಜಾ ತೋರನಳ್ಳಿ, ಸನ್ಮತಿ ಮುಗಳಖೋಡ, ಪ್ರತಿಭಾ ಮದಿಹಳಿ ವಿದ್ಯಾರ್ಥಿ ಜೀವನ ಕುರಿತು ಅನಿಸಿಕೆ ಹಚ್ಚಿಕೊಂಡರು. ಶಿಕ್ಷಕರಿಗೆ ಸನ್ಮಾನ ಜರುಗಿತು.
ಶಿಕ್ಷಕರಾದ ಎಸ್.ಆರ್.ಕುದರಗಿ, ಬಿ.ಎಸ್.ಕಮತೆ, ಸವಿತಾ ಕೋತ್ಯಗೋಳ, ಎಂ.ಎಂ.ದೊಡಮನಿ, ಎಸ್.ಸಿ.ಚಿಮ್ಮಟ, ಎ.ಎಸ್.ಧನಗರ, ಐ.ಆರ್.ಸೈಯದ, ಕಾಡಪ್ಪ ಡೋಣವಾಡೆ, ವಿಠ್ಠಲ ಕಟ್ಟಿಕಾರ, ಸಾಗರ ಕೊಟಬಾಗಿ, ಹನುಮಂತ ಈಟಿ, ಭೀರಪ್ಪ ನಾಗರಾಳೆ, ಅನಿತಾ ಕೋಳಿ, ಯಲ್ಲಪ್ಪ ಕಟ್ಟಿಕಾರ, ರಾಜು ಮಳವಾಡ, ಶ್ರೀದೇವಿ ಕೊಟಬಾಗಿ ,ಮಂಜುನಾಥ ಕುಪವಾಡ, ದೀಪಾ ಈಟಿ, ಸನ್ಮತಿ ಮುಗಳಖೋಡ, ಮಲ್ಲಿಕಾರ್ಜುನ ಕಿಲ್ಲೆದಾರ, ಸಂಗಮೇಶ ಹಳ್ಳೂರು ಇತರರು ಇದ್ದರು.