ಕಾರ್ಖಾನೆಗೆ ಸಚಿವ ನಾಗೇಶ ಭೇಟಿ

29manjari3-Web
ಶಿವಶಕ್ತಿ ಶುಗರ್ಸ್ ಸಕ್ಕರೆ ಕಾರ್ಖಾನೆಯ ಹರ್ಮ್ಸ್ ಡಿಸ್ಟಿಲರಿ ಮಧ್ಯಾರ್ಕ್ ಉತ್ಪಾದನಾ ಘಟಕಕ್ಕೆ ಅಬಕಾರಿ ಸಚಿವ ಎಚ್.ನಾಗೇಶ ಶನಿವಾರ ಭೇಟಿ ನೀಡಿದರು. ಡಾ.ಪ್ರಭಾಕರ ಕೋರೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಅಮಿತ್ ಕೋರೆ ಇತರರು ಇದ್ದರು.
Published on

ಮಾಂಜರಿ: ರಾಯಬಾಗ ತಾಲೂಕಿನ ಯಡ್ರಾಂವದಲ್ಲಿರುವ ಶ್ರೀ ಶಿವಶಕ್ತಿ ಶುಗರ್ಸ್ ಲಿಮಿಟೆಡ್‌ನ ಹರ್ಮ್ಸ್ ಡಿಸ್ಟಿಲರಿಸ್ ಪ್ರೈ. ಲಿಮಿಟೆಡ್ ಘಟಕಕ್ಕೆ ಶನಿವಾರ ಅಬಕಾರಿ ಸಚಿವ ಎಚ್.ನಾಗೇಶ ಅವರು ಭೇಟಿ ನೀಡಿ ಹೊಸದಾಗಿ ಪ್ರಾರಂಭಿಸಿದ ಮಧ್ಯಾರ್ಕ್ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿದರು. ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ಸಂಸದ ಅಣ್ಣಾಸಾಹೇಬ ಜೊಲ್ಲೆ, ಶಾಸಕ ದುರ್ಯೋಧನ ಐಹೊಳೆ, ಅಬಕಾರಿ ಇಲಾಖೆಯ ಆಯುಕ್ತ ಲೋಕೇಶ ಎಂ., ಜಂಟಿ ನಿರ್ದೇಶಕ ಆಯುಕ್ತ ಮಂಜುನಾಥ, ಚಿದಾನಂದ ಕೋರೆ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಅಮಿತ್‌ಕೋರೆ, ಉಪಾಧ್ಯಕ್ಷ ಸಂದೀಪ ಪಾಟೀಲ, ಸಂಚಾಲಕರಾದ ಮಲಿಕಾರ್ಜುನ ಕೋರೆ, ಭರತ ಬನವಣೆ, ತಾತ್ಯಾಸಾಬ ಕಾಟೆ, ಮಲ್ಲಪ್ಪ ಮೈಶಾಳೆ, ರಾಮಚಂದ್ರ ನಿಶಾನದಾರ, ಮಹಾವೀರ ಮಿರ್ಜಿ, ಬಾಳಗೌಡ ರೇಂದಾಳೆ, ಪ್ರಕಾಶ ಪಾಟೀಲ, ಚೇತನ ಪಾಟೀಲ ಹಾಗೂ ಶಿವಶಕ್ತಿ ಶುಗರ್ಸ್‌ ಅಧಿಕಾರಿಗಳು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net