ಗೋ ಶಾಲೆ ಅನುದಾನ ದುರುಪಯೋಗ ಆರೋಪ

ctd 29 konche shivarudrappa
Published on

ಚಿತ್ರದುರ್ಗ: ಜಿಲ್ಲೆಯ ಬರ ಪೀಡಿತ ಪ್ರದೇಶಗಳಲ್ಲಿ ಗೋ-ಶಾಲೆಗಳನ್ನು ಆರಂಭಿಸಲು 2016-17ರಲ್ಲಿ ವಿಪತ್ತು ನಿರ್ವಹಣಾ ನಿಧಿಯಿಂದ ಬಿಡುಗಡೆ ಯಾಗಿದ್ದ 80 ಕೋಟಿ ರೂ.ಅನುದಾನದಲ್ಲಿ ಭಾರೀ ದುರುಪಯೋಗವಾಗಿದೆ ಎಂದು ರಾಷ್ಟ್ರೀಯ ಕಿಸಾನ್ ಸಂಘ ಆರೋಪಿಸಿದೆ.

ಬರಗಾಲದ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗೋಶಾಲೆಗಳಿಗೆ ಮೇವು ಪೂರೈಸಲು ಚಳ್ಳಕೆರೆಗೆ 30.60 ಕೋಟಿ ರೂ.,ಚಿತ್ರದುರ್ಗ ತಾಲೂಕಿಗೆ 7 ಕೋಟಿ ರೂ.ಬಿಡುಗಡೆಯಾಗಿತ್ತು. ಆದರೆ ಈ ಅನುದಾನ ಸದ್ಬಳಕೆ ಆಗಿಲ್ಲ.

ಲೆಕ್ಕ ಪರಿಶೋಧನಾ ವರದಿಯಲ್ಲಿ 5.15 ಕೋಟಿ ರೂ.ಗಳಿಗೆ ಸೂಕ್ತ ದಾಖಲೆ ನೀಡಿಲ್ಲ. ನಕಲಿ ಬಿಲ್,ನಕಲಿ ಜಿಎಸ್‌ಟಿ ವಿಳಾಸಗಳು, ತಪ್ಪಾ ಗಿವೆ. ಮೇವು ಸರಬರಾಜು ದಿನಾಂಕಗಳು, ಟ್ರಾಕ್ಟರ್ ನಂಬರ್‌ಗಳನ್ನು ನಮೂದಿಸದೇ, ಅಧಿಕಾರಿಗಳು-ನೌಕರರು,ಸರಬರಾಜುದಾರ ರೊಂದಿ ಗೆ ಒಳ ಒಪ್ಪಂದ ಮಾಡಿಕೊಂಡು 50 ಕೋಟಿ ರೂ.ಹೆಚ್ಚು ಹಣವನ್ನು ಲಪಟಾಯಿಸಲಾಗಿದೆ.

ಆದ್ದರಿಂದ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿ ಸಂಘದ ರಾಜ್ಯ ಪ್ರಧಾನ ಕಾರ‌್ಯದರ್ಶಿ ಕೊಂಚೆ ಶಿವರುದ್ರಪ್ಪ,ಜಿಲ್ಲಾ ಸಮಿತಿಯ ಮಹಾದೇವಪ್ಪ,ಹೇಮಂತ್‌ಕುಮಾರ್,ಇ.ರವಿ ಹಾಗೂ ಮಂಜುಳಾ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

-------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net