ಆರೋಗ್ಯದಿಂದಿರಲು ಯೋಗ ಮಾಡಿ

12 KAMPLI 03
Published on

ಕಂಪ್ಲಿ: ನಿತ್ಯಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು ಎಂದು ಗಾಯತ್ರಿ ಯೋಗ ಕೇಂದ್ರದ ಪ್ರಾಚಾರ್ಯ ಬಿ.ರವೀಂದ್ರನಾಥ ಶ್ರೇಷ್ಠಿ ಹೇಳಿದರು. ಇಲ್ಲಿನ ಶ್ರೀ ಗಾಯತ್ರಿ ಯೋಗಾ ಕೇಂದ್ರ ಶುಕ್ರವಾರ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮ ಅಧ್ಯಕ್ಷತೆವಹಿಸಿ ಮಾತನಾಡಿದರು.

ನಿತ್ಯ ಯೋಗಾಭ್ಯಾಸ ಮಾಡಿದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಇಂದಿನ ರಾಸಾಯನಿಕಯುಕ್ತ, ಕಲಬೆರಕೆಯುಳ್ಳ ಆಹಾರಸೇವನೆಯಿಂದ ನಾನಾ ರೋಗಗಳು ಅಂಟಿಕೊಳ್ಳುತ್ತಿವೆ.

ಇದರ ಪರಿಣಾಮ ಕುಗ್ಗಿಸಲು ಯೋಗವನ್ನು ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದರು. ಹಂಪೆಯ ಯೋಗ ಗುರೂಜಿ ಟಿ.ಆನಂದ್ ಮಾತನಾಡಿ, ಗುರುಮುಖೇನಾ ಯೋಗಾಭ್ಯಾಸ ಮಾಡಿ. ಮನಸ್ಸು, ಬುದ್ಧಿ ಮತ್ತು ದೇಹದ ಆರೋಗ್ಯಕ್ಕೆ ಯೋಗಾಭ್ಯಾಸ ರಾಮಬಾಣ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net