ದೌರ್ಜನ್ಯ ಮೆಟ್ಟಿ ನಿಲ್ಲಲು ಒಗ್ಗೂಡಿ

Snd K Neela
ಕೆ. ನೀಲಾ
Published on

ಸಿಂಧನೂರು: ಮಹಿಳೆಯರು ಮೂಲಭೂತ ಹಕ್ಕು ಪಡೆಯಲು ಒಗ್ಗೂಡಬೇಕು. ದೌರ್ಜನ್ಯ ಮೆಟ್ಟಿ ನಿಲ್ಲಬೇಕೆಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ರಾಜ್ಯಾಧ್ಯಕ್ಷೆ, ಹಿರಿಯ ಹೋರಾಟಗಾರ್ತಿ ಕೆ. ನೀಲಾ ಹೇಳಿದರು.

ನಗರದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ‘ಘನತೆಯ ಬದುಕು ಮಹಿಳೆಯರ ಹಕ್ಕು’ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ಅತ್ಯಾಚಾರ, ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ಮಹಿಳೆಯರು ಸಂಘಟಿತ ಹೋರಾಟ ರೂಪಿಸಬೇಕಾಗಿದೆ ಎಂದರು.

ಪ್ರಧಾನ ಕಾರ್ಯದರ್ಶಿ ದೇವಿ ಮಾತನಾಡಿ, ಸಿಂಧನೂರಿನಲ್ಲಿ ಆ. 30, 31 ಹಾಗೂ ಸೆ. 1ರಂದು ನಡೆಯುವ ರಾಜ್ಯ ಮಟ್ಟದ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಜನವಾದಿ ಮಹಿಳಾ ಸಂಘಟನೆ ನಡೆದು ಬಂದ ಹಾದಿಯನ್ನು ಸಂಘಟನೆ ಸಂಚಾಲಕಿ ಎಸ್. ವಿಮಲಾ ವಿವರಿಸಿದರು. ಜಿಲ್ಲಾ ಸಮಿತಿ ಅಧ್ಯಕ್ಷೆ ಸರಸ್ವತಿ ಪಾಟೀಲ್, ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿದರು. ಮಹಿಳಾ ಸಬಲೀಕರಣ ಘಟಕದ ಸಂಯೋಜನಾಧಿಕಾರಿ ಡಾ.ರೇಣುಕಾ ಎಂ. ರೆಡ್ಡಿ, ಮಹಾಂತೇಶ ಕೊಡಗಲಿ, ಗಿರಿಜಾ ಕಿಲ್ಲೇದ್, ಬಸವಂತರಾಯಗೌಡ ಕಲ್ಲೂರು, ಉಪನ್ಯಾಸಕರಾದ ಭೀಮಪ್ಪ ಅರಕೇರಾ, ಶಂಕರ್ ವಿಶ್ವಕರ್ಮ ಕುರುಕುಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net