ಸೊಲ್ಲಾಪುರಕ್ಕೆ ಕೆಎಲ್‌ಇ ಸೇವೆ ವಿಸ್ತರಣೆ

4Solapur1
ಸೊಲ್ಲಾಪುರದಲ್ಲಿ ಕೆಎಲ್‌ಇ ಸಂಸ್ಥೆಯ ನೂತನ ಸಿಬಿಎಸ್‌ಇ ಶಾಲೆ ನಿರ್ಮಾಣಕ್ಕೆ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಭೂಮಿಪೂಜೆ ನೆರವೇರಿಸಿದರು. ಆಶಾ ಕೋರೆ, ಶ್ರೀಶೈಲಪ್ಪ ಮೆಟಕೂಟ, ಶಂಕರಪ್ಪ ಮುನಾಳಿ, ಅನಿಲ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಬಿ.ಆರ್.ಪಾಟೀಲ, ಧರ್ಮರಾಜ ಕಾಡಾದಿ, ಸುದೀಪ ಚಾಕೋತೆ ಇತರರಿದ್ದರು.
Published on

ಸೊಲ್ಲಾಪುರ: ಉತ್ತಮ ಶಿಕ್ಷಣ ಮೂಲಕ ದೇಶ ಮಟ್ಟದಲ್ಲಿ ಹೆಸರು ಮಾಡಿದ ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆ (ಕೆಎಲ್‌ಇ) ತನ್ನ ಸೇವೆಯನ್ನು ಸೊಲ್ಲಾಪುರ ಜಿಲ್ಲೆಗೂ ವಿಸ್ತರಿಸಲಿದೆ ಎಂದು ಸಂಸ್ಥೆ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ ಹೇಳಿದರು.

ನಗರದ ಕಳಕೆ ವಸ್ತಿಯ ಹಳೆಯ ಕಾರಂಬಾ ನಾಕಾ ಹತ್ತಿರದ ಕೆಎಲ್‌ಇ ಸಂಸ್ಥೆಯ ನೂತನ ಸಿಬಿಎಸ್‌ಇ ಶಾಲೆ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿದ ಅವರು, ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿರುವ ಕೆಎಲ್‌ಇ ಇಂದು ವೈದ್ಯಕೀಯ, ಕೃಷಿ, ಆರೋಗ್ಯ, ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಹೆಜ್ಜೆಗುರುತು ಮೂಡಿಸಿದೆ. ತಂತ್ರಜ್ಞಾನ ಜತೆಗೆ ಅತ್ಯುತ್ತಮ ಮತ್ತು ಸ್ವಾವಲಂಬಿ ಶಿಕ್ಷಣ ಒದಗಿಸಲು ಸೊಲ್ಲಾಪುರ ಜಿಲ್ಲೆಯಲ್ಲಿ ಸಂಸ್ಥೆ ಸೇವಾ ಕ್ಷೇತ್ರ ವಿಸ್ತರಿಸಲಾಗಿದೆ ಎಂದರು.

ಡಾ.ಪ್ರಭಾಕರ ಕೋರೆ ಪತ್ನಿ ಆಶಾ, ಮಾಜಿ ಶಾಸಕರಾದ ವಿಶ್ವನಾಥ ಚಾಕೋಟೆ, ಪ್ರಕಾಶ ಯಲಗುಲವಾರ, ಕೆಎಲ್‌ಇ ಆಡಳಿತ ಮಂಡಳಿಯ ಶ್ರೀಶೈಲಪ್ಪ ಮೆಟಕೂಟ, ಶಂಕರಪ್ಪ ಮುನಾಳಿ, ಅನಿಲ ಬಾಗೇವಾಡಿ, ಮಹಾಂತೇಶ ಕವಟಗಿಮಠ, ಬಿ.ಆರ್. ಪಾಟೀಲ, ಜಯಾನಂದ ಮುನೋಳಿ, ವಿ.ಐ. ಪಾಟೀಲ, ಅನಿಲ ಪಟ್ಟೇದ, ಡಾ.ಪ್ರೀತಿ ದೊಡವಾಡ, ದೀಪಾ ಮೆಟಗುಡ, ಡಾ.ಸತೀಶ್ ನಿಜಪ್ಪ, ಕಾರ್ಯದರ್ಶಿ ಬಿ.ಜಿ. ದೇಸಾಯಿ, ಸಿದ್ಧೇಶ್ವರ ದೇವಸ್ಥಾನ ಅಧ್ಯಕ್ಷ ಧರ್ಮರಾಜ ಕಾಡಾದಿ, ಸಿದ್ಧೇಶ್ವರ ಬ್ಯಾಂಕ್ ಅಧ್ಯಕ್ಷ ನರೇಂದ್ರ ಗಂಬಿರೆ, ಪ್ರಮುಖರಾದ ಸುನೀಲ ಜಲಾಲಪುರೆ, ಮಹಾದೇವ ಬಳಿಗಾರ, ಪ್ರಕಾಶ ಕಡಕೋಳ, ಪುಷ್ಪರಾಜ ಕಾಡಾದಿ, ಸುರೇಖಾ ಬಾವಿ, ಶ್ವೇತಾ ಕೋತವ್ಲೆ, ಮಲ್ಲಿನಾಥ ವಿಭುತೆ, ಡಾ.ರಾಜೇಂದ್ರ ಘೂಳಿ, ವಿಜಯಕುಮಾರ ಕಾಡಾದಿ, ಸುನೀಲ ರಿಕ್ಕೆ, ಉಮೇಶ ಡುಮಣೆ, ಬಸವರಾಜ ಶಾಸ್ತ್ರಿ ಹಿರೇಮಠ, ಬಸವರಾಜ ಸಲಗರ, ಅನಿಲ ಮಂಗರುಳೆ, ಸುದೀಪ ಚಾಕೋತೆ, ಬಸವಣ್ಣಪ್ಪ ಜಮ್ಮ, ಧೈರ್ಯಶೀಲ ಸಾಳುಂಕೆ, ಶಿವಶಂಕರ ಬಿರಾಜದಾರ, ಪ್ರವೀಣ ತಳೆ, ಪ್ರಾಚಾರ್ಯ ಅನಿಲ ಪಾಟೀಲ, ಪ್ರಶಾಂತ ಕೊಲ್ಲೆ, ಎನ್.ಎಸ್.ಕದಂ, ಸತೀಶ ಹಿರೇಮಠ ಇದ್ದರು. ಅದಕ್ಕೂ ಮೊದಲು ಮಹಾತ್ಮ ಬಸವೇಶ್ವರ ಮತ್ತು ಶಿವಯೋಗಿ ಸಿದ್ಧರಾಮೇಶ್ವರ ಪ್ರತಿಮೆಗಳಿಗೆ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net