ಶಿವಲಿಂಗಕ್ಕೆ ವಿಶೇಷ ಪೂಜೆ

28 PÜÊÜá±Ü 02
ಕಂಪ್ಲಿ ಕೋಟೆಯ ಶ್ರೀಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಶರಣ ಶಂಕರ ದಾಸಿಮಯ್ಯನವರ ಜಯಂತ್ಯುತ್ಸವ ಆಚರಿಸಲಾಯಿತು. ಪ್ರಮುಖರಾದ ಕಾರೇಮಂಗಿ ತಿಪ್ಪೇಸ್ವಾಮಿ, ನಾಗರಾಜ, ಬಿ.ವೀರಣ್ಣ, ಅಂಗಡಿ ಮಲ್ಲಿಕಾರ್ಜುನ, ಎಸ್. ವೀರಭದ್ರಪ್ಪ , ಕೆ.ಮಾನಸ, ಕೆ.ನಳಿನಿ, ಕೆ.ರಕ್ಷಿತಾ ಇತರರಿದ್ದರು.
Published on

ಕಂಪ್ಲಿ: ಕೋಟೆಯ ಸಿಂಪಿ ನಾಗಲೀಕ ಬಣಗಾರ ಸಮಾಜದ ಶ್ರೀಜಡೆ ಶಂಕರಲಿಂಗ ದೇವಸ್ಥಾನದಲ್ಲಿ ಸೋಮವಾರ ಶರಣ ಶಂಕರ ದಾಸಿಮಯ್ಯ ಅವರ ಜಯಂತ್ಯುತ್ಸವವನ್ನು ಶ್ರದ್ಧೆ-ಭಕ್ತಿಗಳಿಂದ ಆಚರಿಸಲಾಯಿತು.

ತಾಲೂಕು ಅಧ್ಯಕ್ಷ ಕಾರೇಮಂಗಿ ತಿಪ್ಪೇಸ್ವಾಮಿ ಮಾತನಾಡಿ, ಶರಣ ಶ್ರೀಶಂಕರ ದಾಸಿಮಯ್ಯನವರ ತತ್ವ ಆದರ್ಶಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಜಯಂತ್ಯುತ್ಸವ ಅಂಗವಾಗಿ ಜಡೇ ಶಂಕರಲಿಂಗ ದೇವಸ್ಥಾನದಲ್ಲಿ ಶಿವಲಿಂಗವನ್ನು ವಿಶೇಷವಾಗಿ ಪೂಜಿಸಿ ಅಲಂಕರಿಸಲಾಗಿತ್ತು. ಪದಾಧಿಕಾರಿಗಳಾದ ನಾಗರಾಜ, ಎನ್.ಮಲ್ಲಿಕಾರ್ಜುನ, ಅಳವಂಡಿ ವೀರೇಶ, ರಾಧಾಶೇಖರ, ಕೆ.ಶಿವಕುಮಾರ, ಕೆ.ಜಂಬುನಾಥ, ಸಾಮಂತ್ರಿ ಅಡಿವಪ್ಪ, ಬಸವಪ್ರಭು, ಜಂಬುನಾಥ್, ಕೆ.ಸುಮಾ, ಬಿ. ಭಾರತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net