ಬೈಕ್ ಸವಾರನ ಜೀವ ರಕ್ಷಣೆಗೆ ರಸ್ತೆ ಬಿಟ್ಟು ಕೆಳಜಾರಿದ ಬಸ್

web accident
Published on

ವಿಟ್ಲ: ಮಂಗಳಪದವು ಅನಂತಾಡಿ ರಸ್ತೆಯ ಸುರುಳಿಮೂಲೆ ಎಂಬಲ್ಲಿ ಬೈಕ್ ಸವಾರನೊಬ್ಬನ ಜೀವ ರಕ್ಷಿಸುವ ಪ್ರಯತ್ನದಲ್ಲಿ ಚಾಲಕನ ನಿಯಂತ್ರಣದ ತಪ್ಪಿದ ಕಾಲೇಜು ಬಸ್ಸೊಂದು ರಸ್ತೆ ಬಿಟ್ಟು ಕೆಳಜಾರಿದ್ದು, ಘಟನೆಯಲ್ಲಿ ಬಸ್‌ನಲ್ಲಿದ್ದ ಆಸ್ಪತ್ರೆ ನೌಕರರೊಬ್ಬರಿಗೆ ಗಾಯವಾಗಿದೆ.

ಖಾಸಗಿ ವೈದ್ಯಕೀಯ ಕಾಲೇಜಿಗ ಸೇರಿದ ಬಸ್ ಮಂಗಳಪದವು, ಅನಂತಾಡಿ, ಮಾಣಿ ಕಡೆಯಿಂದ ಮಂಗಳೂರಿನ ವಿವಿಧ ಆಸ್ಪತ್ರೆಗಳ ಸಿಬ್ಬಂದಿಯನ್ನು ಕರೆದುಕೊಂಡು ಹೋಗುತ್ತಿತ್ತು. ಸುರುಳಿಮೂಲೆ ಬಳಿ ಎದುರಿನಿಂದ ಅತಿ ವೇಗದಲ್ಲಿ ಬಂದ ಬೈಕ್ ಏಕಾಏಕಿ ರಸ್ತೆಗೆ ಉರುಳಿದ್ದು, ರಸ್ತೆಗೆ ಬಿದ್ದ ಬೈಕ್ ಸವಾರನ ಜೀವ ಉಳಿಸುವ ಪ್ರಯತ್ನದಲ್ಲಿ ಚಾಲಕ ಬಸ್ಸನ್ನು ರಸ್ತೆ ಬದಿಗೆ ಕೊಂಡೊಯ್ದಿದ್ದಾನೆ. ಈ ಸಂದರ್ಭ ನಿಯಂತ್ರಣ ತಪ್ಪಿದ ಬಸ್ ರಸ್ತೆ ಬದಿಗೆ ಜಾರಿ ಮರವೊಂದ ಬುಡದಲ್ಲಿ ಸಿಕ್ಕಿಹಾಕಿಕೊಂಡಿದೆ. ಬಸ್‌ನಲ್ಲಿದ್ದ 13 ಮಂದಿಯ ಪೈಕಿ ಪಾಣೆಮಂಗಳೂರು ನಿವಾಸಿ ಭಾರತಿ(45) ಗಾಯಗೊಂಡಿದ್ದಾರೆ. ಅವರನ್ನು ಕಲ್ಲಡ್ಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ನ ಹಿಂಬದಿ ಚಕ್ರ ಬೈಕ್ ಮೇಲೆ ಸಾಗಿದ ಪರಿಣಾಮ ಬೈಕ್ ಜಖಂಗೊಂಡಿದೆ. ಬೈಕ್ ಸವಾರ ಇರಂದೂರು ಪಡೀಲ್ ನಿವಾಸಿ ಜಾಕೀರ್‌ಗೂ ಗಾಯಗಳಾಗಿವೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net