ಅಂದಕಾರ ತೊಲಗಿಸಲು ಜ್ಯೋತಿ ಬೆಳಗಿ

2 HADAGALI 01
ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಮಲ್ಲಿಕಾರ್ಜುನ ವಿರಕ್ತ ಮಠದಲ್ಲಿ ಸಹಸ್ರ ದೀಪೋತ್ಸವ ಜರುಗಿತು.
Published on

ಹೂವಿನಹಡಗಲಿ: ತಾಲೂಕಿನ ಹೊಳಲು ಗ್ರಾಮದ ಮಲ್ಲಿಕಾರ್ಜುನ ಮಠದಲ್ಲಿ ಭಾನುವಾರ ರಾತ್ರಿ ನೂರಾರು ಭಕ್ತರ ಸಮ್ಮುಖದಲ್ಲಿ ಸಹಸ್ರ ದೀಪೋತ್ಸ ಜರುಗಿತು.

ಲಿಂಗನಾಯಕನಹಳ್ಳಿ ಚನ್ನವೀರಸ್ವಾಮಿಮಠದ ಉತ್ತರಾಧಿಕಾರಿ ನಿರಂಜನ ದೇವರು ಮಾತನಾಡಿ, ಪ್ರಕೃತಿ ವಿಕೋಪದಿಂದ ರೈತರ ಬದುಕು ಸಂಕಷ್ಟದಲ್ಲಿದೆ. ದೇಶದಲ್ಲಿ ಮಳೆ ಬೆಳೆ ಸಮೃದ್ಧಿಯಾಗುವ ಮೂಲಕ ರೈತನ ಬೆಳೆಗೆ ಜೀವಕಳೆ ಬರಬೇಕು. ಕಾರ್ತಿಕಮಾಸದಲ್ಲಿ ದೀಪ ಬೆಳಗಿಸುವುದು ಎಲ್ಲರ ಅಂದಕಾರ ದೂರಮಾಡಲು. ಮನಸ್ಸು ಶುದ್ಧವಾಗಿದ್ದರೆ ಎಲ್ಲವೂ ಶುದ್ಧವಾಗಿರುತ್ತದೆ ಎಂದರು.

ಹಿರೇಮಲ್ಲನಕೆರಿ ಚನ್ನಬಸವ ಸ್ವಾಮೀಜಿ ಮಾತನಾಡಿ, ಮಠಗಳು ಈ ನಾಡಿನಲ್ಲಿ ಅಕ್ಷರ ಮತ್ತು ಅನ್ನದಾಸೋಹ ಮಾಡುವ ಮೂಲಕ ಸಾಮಾಜಿಕ ಕ್ರಾಂತಿ ಮಾಡಿವೆ ಎಂದರು. ಶ್ರೀಮಠದ ಚನ್ನಬಸವ ದೇವರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net