ರಾಣಿ ಚನ್ನಮ್ಮ ಯುನಿವರ್ಸಿಟಿಗೆ ನಾಗರಾಜ, ವಿಜಯ ಬ್ಲೂ

24SAVADATTI1
Published on

ಸವದತ್ತಿ: ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಿಂದ ಇಲ್ಲಿನ ಕೆಎಲ್​ಇ ಸಂಸ್ಥೆಯ ಎಸ್​ವಿಎಸ್​ ಬೆಳ್ಳುಬ್ಬಿ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಪುರುಷರ ಖೋಖೋ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಮಹಾವಿದ್ಯಾಲಯದ ಬಿಎ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ನಾಗರಾಜ ಗುಡಗಾರ ಮತ್ತು ವಿಜಯ ಗಳಗಿನ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದಾರೆ.

ತಮಿಳುನಾಡಿನ ತಿರುವರೂರಿನ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಡಿ.27ರಿಂದ 31ರ ವರೆಗೆ ಜರುಗುವ ದಣ ಭಾರತ ಅಂತರ್​ ವಿಶ್ವವಿದ್ಯಾಲಯಗಳ ಖೋ ಖೋ ಪಂದ್ಯಾವಳಿಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ತಂಡ ಪ್ರತಿನಿಧಿಸಲಿದ್ದಾರೆ. ಕೆಎಲ್​ಇ ಸಂಸ್ಥೆಯ ಆಡಳಿತ ಮಂಡಳಿ ಕಾರ್ಯಾಧ್ಯ ಡಾ.ಪ್ರಭಾಕರ ಕೋರೆ, ಅಧ್ಯ ಮಹಾಂತೇಶ ಕೌಜಲಗಿ, ನಿರ್ದೇಶಕ ಜಯಾನಂದ ಮುನವಳ್ಳಿ, ಕೆಎಲ್​ಇ ಸಂಸ್ಥೆಯ ಪದವಿ ಕಾಲೇಜುಗಳ ಸಂಯೋಜಕ ಡಾ.ಎಂ.ಪಿ. ಸತೀಶ ಮತ್ತು ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯ ವಿರುಪಾ ಮಾಮನಿ, ಸದಸ್ಯರಾದ ಬಿ.ವಿ. ಮಲಗೌಡರ, ಉಮೇಶ ಬಾಳಿ ಹಾಗೂ ಪ್ರಾಚಾರ್ಯ ಡಾ.ಎನ್​.ಆರ್​. ಸವತೀಕರ, ಕ್ರೀಡಾ ವಿಭಾಗದ ಉಪಾಧ್ಯ ಪ್ರೊ.ಕೆ.ರಾಮರೆಡ್ಡಿ, ಕಾಲೇಜು ಒಕ್ಕೂಟದ ಕಾರ್ಯಾಧ್ಯ ಡಾ.ಎ.ಎ್​. ಬದಾಮಿ, ಐಕ್ಯೂಎಸಿ ಸಂಯೋಜಕ ಪ್ರೊ.ಎ.ಎ. ಹಳ್ಳೂರ, ಡಾ. ಆರುಂಧತಿ ಬದಾಮಿ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net