ನಶಿಸುತ್ತಿದ್ದ ವಚನಗಳ ರಕ್ಷಣೆಗೆ ಶ್ರಮ

SHARANA
ರಾಯಚೂರಿನ ಬಸವ ಕೇಂದ್ರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಜಯಂತಿ ಕಾರ್ಯಕ್ರಮದಲ್ಲಿ ಜಾಡಲದಿನ್ನಿ ಬಸವ ಯೋಗಾಶ್ರಮದ ವೀರಭದ್ರ ಸ್ವಾಮೀಜಿ, ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ, ಪದಾಧಿಕಾರಿಗಳಾದ ವಿಜಯಕುಮಾರ ಸಜ್ಜನ್, ಚನ್ನಬಸವಣ್ಣ ಮಹಾಜನಶೆಟ್ಟಿ, ಲಕ್ಷ್ಮೀ ಪಟ್ಟಣಶೆಟ್ಟಿ, ಶಿವಕುಮಾರ ಮಾಟೂರ, ಅನ್ನಪೂರ್ಣಮ್ಮ ಮೇಟಿ, ಜಗದೇವಿ ಇದ್ದರು.
Published on

ರಾಯಚೂರು: ಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವುದರ ಜತೆಗೆ ನಾಡಿನಾದ್ಯಂತ ಪಸರಿಸುವಂತೆ ಮಾಡುವಲ್ಲಿ ಡಾ.ಫ.ಗು.ಹಳಕಟ್ಟಿ ಕೊಡುಗೆ ಅಪಾರವಾಗಿದೆ. ಈ ಮೂಲಕ ನಶಿಸಿ ಹೋಗುತ್ತಿದ್ದ ಶರಣರ ವಚನಗಳು ನಮಗೆ ದೊರೆಯುವಂತಾಗಿದೆ ಎಂದು ಜಾಡಲದಿನ್ನಿ ಬಸವ ಯೋಗಾಶ್ರಮದ ವೀರಭದ್ರ ಸ್ವಾಮೀಜಿ ಹೇಳಿದರು.

ನಗರದ ಬಸವ ಕೇಂದ್ರದಲ್ಲಿ ಡಾ.ಫ.ಗು.ಹಳಕಟ್ಟಿ ಜಯಂತಿ ಅಂಗವಾಗಿ ಭಾನುವಾರ ಏರ್ಪಡಿಸಿದ್ದ ವಚನ ಸಂಶೋಧನಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಅವರು ಉಳಿಸಿಕೊಟ್ಟ ಅಮೂಲ್ಯ ವಚನ ಸಾಹಿತ್ಯವನ್ನು ಬೆಳೆಸುವ ಕೆಲಸ ಮಾಡಬೇಕು ಎಂದರು.


ನಿವೃತ್ತ ಪ್ರಾಚಾರ್ಯ ಡಾ.ಪರಮೇಶ್ವರ ಸಾಲಿಮಠ ಮಾತನಾಡಿ, ಬಸವಾದಿ ಶರಣರ ವಚನ ಸಾಹಿತ್ಯ ಇರುವವರೆಗೂ ಹಳಕಟ್ಟಿಯವರ ಹೆಸರು ಅಮರವಾಗಿರಲಿದ್ದು, ವಚನ ಸಾಹಿತ್ಯವನ್ನು ಜನರ ಮನ, ಮನೆಗೆ ಮುಟ್ಟಿಸುವಲ್ಲಿ ಅವರ ಪಾತ್ರ ದೊಡ್ಡದಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ಬಸವ ಕೇಂದ್ರದ ಅಧ್ಯಕ್ಷ ರಾಚನಗೌಡ ಕೋಳೂರು ಮಾತನಾಡಿ, ಬಸವಾಭಿಮಾನಿಗಳು ಹಳಕಟ್ಟಿಯವರ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಅವರು ಉಳಿಸಿಕೊಟ್ಟ ವಚನ ಸಾಹಿತ್ಯ ವಿಶ್ವದೆಲ್ಲೆಡೆ, ಮಾನವಕುಲಕ್ಕೆ ಹಬ್ಬುವಂತೆ ಎಲ್ಲರೂ ಮಾಡಬೇಕು ಎಂದು ಹೇಳಿದರು.
ಸೇವೆಯಿಂದ ನಿವೃತ್ತಿಯಾದ ಉಪನ್ಯಾಸಕಿ ಜಯಶ್ರೀ ಮಹಾಜನಶೆಟ್ಟಿ ಹಾಗೂ ನರಸಿಂಹಲುರನ್ನು ಗೌರವಿಸಲಾಯಿತು.

ಅಕ್ಕನ ಬಳಗದ ಗೌರವಾಧ್ಯಕ್ಷರಾಗಿ ಅನ್ನಪೂರ್ಣಮ್ಮ ಮೇಟಿ, ಅಧ್ಯಕ್ಷೆಯಾಗಿ ಜಗದೇವಿ ಚನ್ನಬಸವರನ್ನು ಆಯ್ಕೆ ಮಾಡಲಾಯಿತು. ಬಸವ ಕೇಂದ್ರದ ಪದಾಧಿಕಾರಿಗಳಾದ ವಿಜಯಕುಮಾರ ಸಜ್ಜನ್, ಚನ್ನಬಸವಣ್ಣ ಮಹಾಜನಶೆಟ್ಟಿ, ಲಕ್ಷ್ಮೀ ಪಟ್ಟಣಶೆಟ್ಟಿ, ಶಿವಕುಮಾರ ಮಾಟೂರ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net