

ಚಿಕ್ಕೋಡಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಕಡೆಗಣನೆ ಮಾಡುವ ಮೂಲಕ ಸಂವಿಧಾನ ಕೊಲೆ ಮಾಡುವ ಹುನ್ನಾರ ನಡೆಸುತ್ತಿದೆ ಎಂದು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ ಜಾರಕಿಹೊಳಿ ಆಕ್ರೋಶ ವ್ಯಕ್ತಪಡಿಸಿದರು.
ಇಲ್ಲಿನ ಲೋಕೋಪಯೋಗಿ ಸಭಾಭವನದಲ್ಲಿ ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಚಿಕ್ಕೋಡಿ ಘಟಕ ಶನಿವಾರ ಹಮ್ಮಿಕೊಂಡಿದ್ದ ಜೈ ಬಾಪು, ಜೈ ಭೀಮ, ಜೈ ಸಂವಿಧಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ರಕ್ಷಣೆ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಯುವ ಪೀಳಿಗೆಗೆ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಬುದ್ಧ, ಬಸವಣ್ಣ ಅವರ ತತ್ತ್ವ , ಆದರ್ಶ ತಿಳಿಸುವ ಕಾರ್ಯ ಮಾಡಬೇಕಿದೆ. ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಎನ್‌ಎಸ್‌ಯುಐ ಹೋರಾಟ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು. ಡಿ.ದೇವರಾಜ ಅರಸು ನಿಗಮ ಮಂಡಳಿ ಅಧ್ಯಕ್ಷ ಕೀರ್ತಿ ಗಣೇಶ, ಎನ್‌ಎಸ್‌ಯುಐ ಚಿಕ್ಕೋಡಿ ಜಿಲ್ಲಾಧ್ಯಕ್ಷ ಚೇತನ ಹೊನ್ನಗೋಳ, ಪ್ರದೀಪ ನಡುವಳಿ, ವಿವೇಕ ಯಾವಗಲ್ಲ ಮಾತನಾಡಿದರು.
ಮುಖಂಡರಾದ ಶಿವು ಪಾಟೀಲ, ಅರ್ಜುನ ನಾಯಿಕವಾಡಿ, ಗಣೇಶ ಮೋಹಿತೆ, ಪ್ರಭಾಕರ ಕೋರೆ, ರುದ್ರಪ್ಪ ಸಂಗಪ್ಪಗೋಳ, ಶಿವು ಮರ್ಯಾಯಿ, ಸಂಜಯ ಕಾಂಬಳೆ, ಸಾದೀಕ್ ಅಂಕಲಗಿ, ಚಿಕ್ಕೋಡಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಪಾಟೀಲ, ಮುತ್ತಪ್ಪ ಕಬ್ಬೂರೆ, ಅಕ್ಷಯ ವೀರಮುಖ, ಬಾಲಕೃಷ್ಣ ಪಾಟೀಲ, ರವೀಂದ್ರ ಬಸನಾಯಿಕ, ಪ್ರದೀಪ, ಬಾಳಕೃಷ್ಣ ಪಾಟೀಲ, ರಾಮಕೃಷ್ಣ ಪಾನಗುಡೆ ಇತರರಿದ್ದರು.