ಅಪೌಷ್ಟಿಕತೆ ನಿವಾರಣೆಗೆ ಸಮತೋಲನ ಆಹಾರ ಸೇವಿಸಿ

hnr
ಹನುಮಸಾಗರದ 12ನೇ ಅಂಗನವಾಡಿ ಕೇಂದ್ರದಲ್ಲಿ ಬುಧವಾರ ಪೌಷ್ಟಿಕ ಆಹಾರ ಕುರಿತು ಸಮಾಲೋಚನೆ ಸಭೆ ನಡೆಯಿತು. ಕಿರಿಯ ಆರೋಗ್ಯ ಸಹಾಯಕ ವೀರೇಶ ಹಿರೇಮಠ, ಆಶಾ ಕಾರ್ಯಕರ್ತೆರಾದ ರತ್ನಾ ಬಾಚಲಾಪುರ, ಮಹೇಶ್ವರಿ ಕರಪಡಿ, ಹನುಮಂತಿ ಕಟ್ಟಿಮನಿ ಇತರರಿದ್ದರು.
Published on

ಹನುಮಸಾಗರ: ಗರ್ಭಿಣಿಯರು, ಬಾಣಂತಿಯರು ಹಸಿ ತರಕಾರಿ, ಮೊಟ್ಟೆ, ಮೊಳಕೆ ಕಾಳು ಮಿತ ಪ್ರಮಾಣದಲ್ಲಿ ನಿತ್ಯ ಸೇವಿಸಬೇಕು ಎಂದು ಕಿರಿಯ ಆರೋಗ್ಯ ಸಹಾಯಕ ವೀರೇಶ ಹಿರೇಮಠ ಹೇಳಿದರು.


ಪಟ್ಟಣದ 12ನೇ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರದ ಮಹತ್ವ ಕುರಿತು ಜಾಗೃತಿ ಮೂಡಿಸಲು ಬುಧವಾರ ಹಮ್ಮಿಕೊಂಡಿದ್ದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಅಪೌಷ್ಟಿಕತೆ ನಿವಾರಣೆಗೆ ನಿತ್ಯ ಸಮತೋಲನ ಆಹಾರ ಸೇವಿಸಬೇಕು. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಹೆರಿಗೆ ಸಮಯದಲ್ಲಿ ತಾಯಿ ಮತ್ತು ಮಗುವಿಗೆ ಸಮಸ್ಯೆಯಾಗುತ್ತದೆ. ಅದಕ್ಕಾಗಿ ಪ್ರತಿನಿತ್ಯ ಮಿತ ಪ್ರಮಾಣದಲ್ಲಿ ಬೆಲ್ಲ ಮತ್ತು ಶೇಂಗಾ ಸೇವಿಸಬೇಕು ಎಂದರು.
ಆರೋಗ್ಯ ಸಹಾಯಕ ಮಂಜುನಾಥ, ಕಾರ್ಯಕರ್ತೆರಾದ ರತ್ನಾ ಬಾಚಲಾಪುರ, ಮಹೇಶ್ವರಿ ಕರಪಡಿ, ಹನುಮಂತಿ ಕಟ್ಟಿಮನಿ, ಹುಲಿಗೆಮ್ಮ ವಡ್ಡರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net