

ಮಡಿಕೇರಿ :
ಕೊಡಗು ಜಿಲ್ಲಾ ಪಂಚಾಯತ್ ನಲ್ಲಿ ಕಳೆದ 1 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ವರ್ಣಿತ್ ನೇಗಿ ರವರಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ವತಿಯಿಂದ ಬೀಳ್ಕೊಡುಗೆಯನ್ನು ನೀಡಲಾಯಿತು.
ವರ್ಗಾವಣೆಗೊಂಡ ಹಿನ್ನೆಯಲ್ಲಿ ಕೊಡಗು ಜಿಲ್ಲಾ ಪಂಚಾಯಿತಿಯ ಸಭಾಂಗಣದಲ್ಲಿ ಬೀಳ್ಕೊಡಿಗೆ ಸಮಾರಂಭವನ್ನು ಏರ್ಪಡಿಸಿ ವಿವಿಧ ಇಲಾಖೆಗಳಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ ಜಿಲ್ಲೆಯ ಉತ್ತಮ ಆಡಳಿತಕ್ಕೆ ತಂಡದ ಕೋಚ್ ರೀತಿ ಶ್ರಮಿಸಿದ್ದು , ಮಾತು ಕಡಿಮೆ ಕೆಲಸ ಜಾಸ್ತಿ ಎಂಬ ತತ್ವದ ಮೇಲೆ ಕೆಲಸ ನಿರ್ವಹಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ ಅವರ ಮುಂದಿನ ವೃತ್ತಿ ಜೀವನದಲ್ಲಿ ಸಾಕಷ್ಟು ಯಶಸ್ಸು ಸಿಗಲಿ ಎಂದು ಶುಭ ಕೋರಿದರು.
ನಂತರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ರಾಮಾರಾಜನ್ ರವರು ಮಾತನಾಡಿ, ಸರ್ಕಾರಿ ಸೇವೆಯಲ್ಲಿ ವರ್ಗಾವಣೆ ಎಂಬುದು ನಿಶ್ಚಿತ ಕುಟುಂಬದ ಸದಸ್ಯರಂತೆ ಹಾಗೂ ಉತ್ತಮ ಸ್ನೇಹಿತರಾಗಿ ಕಳೆದ ಒಂದು ವರ್ಷದಿಂದ ಇದ್ದು ಇಂದು ವರ್ಗಾವಣೆಗೊಳ್ಳುತ್ತಿದ್ದು ಬಹಳ ಬೇಸರವನ್ನುಂಟು ಮಾಡಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ನಿರ್ಗಮಿತ ಜಿ.ಪಂ.ಸಿ.ಇ.ಒ ವರ್ಣೀತ್ ನೇಗಿ ಜಿಲ್ಲೆಯಲ್ಲಿ ಕೆಲಸ ಮಾಡಿದ್ದು ತೃಪ್ತಿಯನ್ನು ತಂದಿದೆ , ಪ್ರಾರಂಭಿಕ ದಿನಗಳಲ್ಲಿ ಸಾಕಷ್ಟು ಸವಾಲುಗಳು ಎದುರಾಯಿತು, ಕಾಲ ಕ್ರಮೇಣ ಎಲ್ಲಾ ಸರಿ ಹೊಂದಿ ಇಂದು ವರ್ಗಾವಣೆಗೊಂಡು ಹೋಗುತ್ತಿದ್ದೇನೆ. ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಜಿಲ್ಲೆಯ ಇಲಾಖೆಗಳ ಅಭಿವೃದ್ದಿಗೆ ಶ್ರಮಿಸಿದ್ದೀರಾ ಎಲ್ಲಾರಿಗೂ ಹೃದಯಪೂರ್ವಕ ವಂದನೆಗಳು ಎಂದು ತಮ್ಮ ಅಸಿಕೆಯನ್ನು ವ್ಯಕ್ತಪಡಿಸಿದರು.
ಬೀಳ್ಕೊಡಿಗೆ ಸಮಾರಂಭದಲ್ಲಿ ಉಪ ವಿಭಾಗಾಧಿಕಾರಿಗಳಾದ ವಿನಾಯಕ ನರ್ವಾಡೆ ಜಿ.ಪಂ.ಉಪ ಕಾರ್ಯದರ್ಶಿಗಳಾದ ಧನರಾಜ್,ಮುಖ್ಯ ಲೆಕ್ಕಾಧಿಕಾರಿಗಳಾದ ಝೀವಲ್ ಖಾನ್ ,ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.