

ಜಿ.ನಾಗರಾಜ್ ಬೂದಿಕೋಟೆ
ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಕೈಕೊಟ್ಟ ಹಿನ್ನೆಲೆಯಲ್ಲಿ ಕೆರೆ&ಕುಂಟೆಗಳೆಲ್ಲ ನೀರಿಲ್ಲದೆ ಒಣಗುತ್ತಿದ್ದು, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಅಕ್ರಮವಾಗಿ ಮಣ್ಣು ಸಾಗಿಸುವ ಮೂಲಕ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ.
ಈ ಅಕ್ರಮ ಹಗಲು&ರಾತ್ರಿ ಎನ್ನದೆ ನಡೆಯುತ್ತಿದ್ದರೂ ಬಂಗಾರಪೇಟೆ ತಾಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ.
ಕೋಲಾರ ಜಿಲ್ಲೆಯಲ್ಲಿ ಯಾವುದೇ ನದಿ ಮೂಲಗಳಿಲ್ಲ. ಕೆರೆ&ಕುಂಟೆಗಳನ್ನೇ ನಂಬಿ ಬಹುತೇಕ ರೈತರು ಬೇಸಾಯ ಮಾಡುತ್ತಿದ್ದಾರೆ. ಕೆರೆಕುಂಟೆಗಳಲ್ಲಿ ನೀರಿದ್ದರೆ ಮಾತ್ರ ಅಂತರ್ಜಲ ವೃದ್ಧಿಯಾಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೊರೆಸಿರುವ ಕೊಳವೆ ಬಾವಿಗಳಲ್ಲಿ ನೀರು ಲಭಿಸುತ್ತದೆ. ಆದರೆ ಈ ಬಾರಿ ಮಳೆಯಿಲ್ಲದೆ ಕೆರೆ&ಕುಂಟೆಗಳು ಖಾಲಿಯಾಗಿದ್ದು, ಕೆಲ ಪ್ರಭಾವಿಗಳು ಕೆರೆಯಲ್ಲಿದ್ದ ಮಣ್ಣನ್ನು ಯಾರ ಅನುಮತಿಯೂ ಇಲ್ಲದೆ ಮಾರಾಟ ಮಾಡಿ, ಹಣ ಗಳಿಸಲು ಮುಂದಾಗಿದ್ದಾರೆ.
ಆಂಧ್ರ, ತಮಿಳುನಾಡಿಗೆ ಮಾರಾಟ
ಬಂಗಾರಪೇಟೆ ತಾಲೂಕಿನ ಕೆಲವು ಕೆರೆಗಳಿಗೆ ಕೆಸಿ ವ್ಯಾಲಿ ನೀರನ್ನು ಹರಿಸಲಾಗುತ್ತಿತ್ತು, ಈಗ ಅದನ್ನೂ ವಿವಿಧ ಕಾರಣಗಳಿಂದ ಸ್ಥಗಿತಮಾಡಲಾಗಿದ್ದು, ಕೆಸಿ ವ್ಯಾಲಿ ಹರಿಯುತ್ತಿದ್ದ ಕೆರೆಗಳು ಸಹ ನೀರಿಲ್ಲದೆ ಖಾಲಿಯಾಗಿವೆ. ನೀರಿಲ್ಲದೆ ಬತ್ತಿ ಹೋಗಿರುವ ಕೆರೆಗಳಲ್ಲಿ ಕೆಲವರು ಮಣ್ಣನ್ನು ಅಕ್ರಮವಾಗಿ ಕಳವು ಮಾರ್ಗದಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.
ಪಕ್ಕದ ಆಂಧ್ರ ಮತ್ತು ತಮಿಳುನಾಡಿನಲ್ಲಿ ಅಲ್ಲಿನ ಸರ್ಕಾರ ಕೆರೆಯಲ್ಲಿ ಮಣ್ಣು ತೆಗೆಯುವುದನ್ನು ನಿಷೇಧಿಸಿರುವುದರಿಂದ ತಾಲೂಕಿನ ಕೆರೆಗಳಿಂದ ಮಣ್ಣನ್ನು ಯಾವುದೇ ಪರವಾನಗಿ ಇಲ್ಲದೆ ಸರಬರಾಜು ಮಾಡಲಾಗುತ್ತಿದೆ. ತಲಾ ಟ್ರಾ$್ಯಕ್ಟರ್ 2000 ರೂ. ಹಾಗೂ ಟಿಪ್ಪರ್ 3 ರಿಂದ 5 ಸಾವಿರ ರೂ. ಗೆ ಮಣ್ಣು ಮಾರಾಟ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ತಂದರೂ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕ್ರಮಕ್ಕೆ ಮುಂದಾಗದ ಅಧಿಕಾರಿಗಳು
ಕೆರೆಗಳ ಸಂರಕ್ಷಣೆ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡರೂ ಪ್ರಭಾವಿಗಳು ಜೆಸಿಬಿ ಮಾಲೀಕರೊಂದಿಗೆ ಶಾಮಿಲಾಗಿ ಹಗಲು&ರಾತ್ರಿ ಎನ್ನದೆ ಮಣ್ಣುಗಾರಿಕೆಗೆ ಮುಂದಾಗಿದ್ದಾರೆ. ಕೆರೆಗಳ ರಕ್ಷಣೆ ಮಾಡಬೇಕಾದ ಸಣ್ಣ ನೀರಾವರಿ, ಕಂದಾಯ, ಪೊಲೀಸ್ ಮತ್ತು ಪಂಚಾಯಿತಿಗಳು ಕೆರೆಗಳ ಸ್ವರೂಪ ಹಾಳಾಗುತ್ತಿದ್ದರೂ ಏನೂ ಅರಿಯದಂತೆ ಕೈ ಕಟ್ಟಿ ಕುಳಿತಿದ್ದಾರೆ. ಕೆರೆಗಳ ಜೀಣೋರ್ದ್ಧಾರಕ್ಕೆ ಸರ್ಕಾರ ನರೇಗಾ ಯೋಜನೆ ಮೂಲಕ ಹಲವು ಕಾರ್ಯಕ್ರಮ ಕೈಗೊಂಡರೂ ಕೆರೆಗಳ ಜೀಣೋರ್ದ್ಧಾರವಾಗದೆ ಅಕ್ರಮ ಮಣ್ಣು ಸಾಗಣೆಗಾರರ ಕಪಿಮುಷ್ಟಿಯಲ್ಲಿ ಸಿಲುಕುವ ಮೂಲಕ ಕೆರೆಗಳಿಗೆ ಕುತ್ತು ಬಂದಿದೆ.
ಪ್ರಭಾವಿ ರಾಜಕಾರಣಿಗಳ ಕೈವಾಡ!
ಕೆಲವು ಪ್ರಭಾವಿ ರಾಜಕಾರಣಿಗಳು ಮತ್ತು ಅವರ ಮಕ್ಕಳು ಸೇರಿ ಇತರರು ನಿತ್ಯ ಜೆಸಿಬಿ ಬಳಸಿಕೊಂಡು ಟಿಪ್ಪರ್ ಮೂಲಕ ಮಣ್ಣು ಸಾಗಿಸುತ್ತಿದ್ದಾರೆ. ಕೆರೆಯಲ್ಲಿ ಲಭ್ಯವಿರುವ ಜೇಡಿ ಮಣ್ಣು, ಗರ್ಚು ಮಣ್ಣಿಗೆ ಇತ್ತೀಚೆಗೆ ಬೇಡಿಕೆ ಹೆಚ್ಚಾಗಿದ್ದು, ರಸ್ತೆ ನಿರ್ಮಾಣ, ಲೇಔಟ್ ನಿರ್ಮಾಣ, ಇಟ್ಟಿಗೆ ್ಯಾಕ್ಟರಿ ಸೇರಿ ಇತರ ಕಾರಣಗಳಿಗೆ ಪ್ರತಿ ಲೋಡ್ ಮಣ್ಣನ್ನು ಸಾವಿರಾರು ರೂ.ಗಳಿಗೆ ಮಾರಾಟ ಮಾಡುವ ಮೂಲಕ ಲಾಂತರ ರೂ. ಅಕ್ರಮವಾಗಿ ಸಂಪಾದಿಸಲು ಮುಂದಾಗಿದ್ದಾರೆ.
"ಹಲವು ಕೆರೆಗಳಲ್ಲಿ ಜೆಸಿಬಿ ಬಳಸಿ ಮಣ್ಣನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ. ಇದರಿಂದ ಕೆರೆಗಳ ಸ್ವರೂಪ ಹಾಳಾಗುವ ಜತೆಗೆ ಪೂರ್ವಿಕರು ಕಟ್ಟಿರುವ ಕೆರೆಗಳು ವಿನಾಶದ ಹಂತಕ್ಕೆ ತಲುಪಿವೆ. ಕೆರೆಯಲ್ಲಿ ಅಕ್ರಮ ಮಣ್ಣು ಸಾಗಣೆ ನಡೆಯುತ್ತಿರುವ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಕಾಟಾಚಾರಕ್ಕೆ ಬಂದು ಹೋಗುತ್ತಿದ್ದಾರೆ, ವಿನ@ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು."
- ಮಾರುತಿ, ಬೂದಿಕೋಟೆ ಗ್ರಾಮಸ್ಥ
"ಕೆರೆಗಳು ಕೃಷಿ, ಜಾನುವಾರು ಮತ್ತು ಅಂತರ್ಜಲ ವೃದ್ಧಿಗೆ ಪ್ರಮುಖ ನೀರಿನ ಮೂಲವಾಗಿದೆ. ಅವುಗಳನ್ನು ಉಳಿಸುವುದು ಮತ್ತು ಜೀಣೋರ್ದ್ಧಾರ ಮಾಡುವುದು ನಮ್ಮೆಲ್ಲರ ಜವಾಬ್ದಾರಿ. ಕೆರೆಗಳು ನಾಲ್ಕು ಇಲಾಖೆಗಳ ವ್ಯಾಪ್ತಿಗೆ ಬರುವುದರಿಂದ ಮುಂದಿನ ದಿನಗಳಲ್ಲಿ ಕಂದಾಯ ಇಲಾಖೆ ಒಳಗೊಂಡಂತೆ ಸಣ್ಣ ನೀರಾವರಿ, ಪೊಲೀಸ್ ಮತ್ತು ಪಂಚಾಯಿತಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕೆರೆಗಳ ಅಭಿವೃದ್ಧಿ ಮತ್ತು ರಕ್ಷಣೆಗೆ ಒತ್ತು ನೀಡಲಾಗುವುದು. ಜತೆಗೆ ಕೆರೆಗಳಲ್ಲಿ ಅಕ್ರಮ ಮಣ್ಣುಗಾರಿಕೆ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ."
- ವೆಂಕಟೇಶಪ್ಪ, ತಹಸೀಲ್ದಾರ್ ಬಂಗಾರಪೇಟೆ