ಎಲ್ಲರ ಒಳಿತಿಗಾಗಿ ಬದುಕಬೇಕು

2BLH3
Published on

ಬೈಲಹೊಂಗಲ: ಎಲ್ಲರಿಗೂ ಒಳಿತು ಬಯಸಿ ಬದುಕುವುದು ಎಲ್ಲರ ಕರ್ತವ್ಯ ಎಂದು ಬೆಂಗಳೂರಿನ ಕೈಲಾಸಾಶ್ರಮ ಮಹಾ ಸಂಸ್ಥಾನದ ಜಗದ್ಗುರು ಅಚಾರ್ಯ ಮಹಾಮಂಡಲೇಶ್ವರ ಜಯೇಂದ್ರಪುರಿ ಮಹಾರಾಜರು ಹೇಳಿದರು.

ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ 85ನೇ ವರ್ಷದ ವರ್ಧಂತಿ ಮಹೋತ್ಸವ, ಶ್ರೀಗಳ 55 ನೇ ವರ್ಷದ ಪೀಠಾರೋಹಣ ಹಾಗೂ ಅಖಿಲ ಭಾರತ ವೇದಾಂತ ಪರಿಷತ್ ಕಾರ್ಯಕ್ರಮದ ನಿಮಿತ್ತ ಗುರುವಾರ ಹಮ್ಮಿಕೊಂಡಿದ್ದ ಯೋಗಿಯನೊಲಿಸಿದೊಡಿಹಪರ ಸಿದ್ದಿ ವಿಷಯ ಕುರಿತು ಮಾತನಾಡಿದರು. ನಾವೆಲ್ಲರೂ ಎಲ್ಲರ ಪ್ರೀತಿಗೆ ಪಾತ್ರರಾಗುವಂತೆ ಬದುಕಬೇಕು. ಗುರುವಿನ ಮಾರ್ಗದರ್ಶನದಲ್ಲಿ ಜೀವನ ನಡೆಸಬೇಕು. ಡಾ.ಶಿವಾನಂದ ಭಾರತಿ ಸ್ವಾಮೀಜಿಗಳು ಭಕ್ತರ ಉದ್ಧಾರಕ್ಕಾಗಿ ಉದ್ದಾರಕ್ಕಾಗಿ ಜನಿಸಿದ್ದಾರೆ ಎಂದರು.

ಹೈದರಾಬಾದ ಪರಾಶ್ರಮದ ಆಚಾರ್ಯ ಪರಿಶುದ್ದಾನಂದಗಿರಿ ಸ್ವಾಮೀಜಿ, ಕುಳ್ಳೂರ ಬಸವಾನಂದ ಸ್ವಾಮೀಜಿ ಮಾತನಾಡಿ, ಪುಣ್ಯ, ಜ್ಞಾನ,

ಶಾಂತಿ, ನೆಮ್ಮದಿ ಪ್ರಾಪ್ತಿಗಾಗಿ ಗುರುವಿನ ಮೊರೆ ಹೋಗಬೇಕು. ಡಾ.ಶಿವಾನಂದ ಭಾರತಿ ಸ್ವಾಮೀಜಿಯ ಸೇವೆ ಸಮಾಜಕ್ಕೆ ಇನ್ನೂ ಸಿಗಲಿ ಎಂದು ಆಶಿಸಿದರು.

ಉಪ ಸಭಾಪತಿ ರುದ್ರಪ್ಪ ಲಮಾಣಿ, ಶಾಸಕ ಲಕ್ಷ್ಮಣ ಸವದಿ ಮಾತನಾಡಿ, ಭಕ್ತರ ಒಳಿತಿಗಾಗಿ ದುಡಿಯುತ್ತಿರುವ ಡಾ.ಶಿವಾನಂದ ಸ್ವಾಮೀಜಿ ಆಶೀರ್ವಾದದ ಲವಾಗಿ ಈ ನಾಡು ಸಮೃದ್ಧವಾಗಿದೆ ಎಂದರು.

ಡಾ.ಶಿವಾನಂದ ಭಾರತಿ ಶ್ರೀಗಳ ಚರಿತ್ರಾಮತ ಗ್ರಂಥವನ್ನು ಅಚಾರ್ಯ ಮಹಾಮಂಡಲೇಶ್ವರ ಜಯೇಂದ್ರ ಪುರಿ ಮಹಾರಾಜ ಲೋಕಾರ್ಪಣೆ ಮಾಡಿದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿ, ಋಷಿಕೇಷಿಯ ಮಹಾಮಂಡಲೇಶ್ವರ ಅಭಿಷೇಕ ಚೈತನ್ಯಗಿರಿ ಮಹಾರಾಜ, ಆಂಧ್ರ ಪ್ರದೇಶದ ಏರಪೇಡು ಪರಿಪೂರ್ಣಾನಂದ ಸ್ವಾಮೀಜಿ, ಹುಬ್ಬಳ್ಳಿಯ ರಾಮಾನಂದ ಸ್ವಾಮೀಜಿ, ಘೋಡಗೇರಿ ಮಲ್ಲಯ್ಯ ಸ್ವಾಮೀಜಿ, ಚಿಕ್ಕುಂಬಿ ಅಭಿನವ ನಾಗಲಿಂಗ ಸ್ವಾಮೀಜಿ, ಮಲ್ಲಾಪುರ ಚಿದಾನಂದ ಸ್ವಾಮೀಜಿ, ಆಡಳಿತಾಧಿಕಾರಿ ಪೂರ್ಣಾನಂದ ಸ್ವಾಮೀಜಿ, ಮಲ್ಲೇಶ ಶರಣರು, ಅಸಂಗಾನಂದ ಸ್ವಾಮೀಜಿ,

ಮಾಜಿ ಶಾಸಕ ಮಹಾಂತೇಶ ದೊಡಗೌಡರ, ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ, ಡಿ.ಬಿ. ಮಲ್ಲೂರ, ಎಸ್.ಎಂ. ರಾವುತನವರ, ಸದೆಪ್ಪ ವಾರಿ, ಚಂದ್ರನಾಯ್ಕ ರಾಯನಾಯ್ಕರ, ಉದ್ಯಮಿ ವಿಜಯ ಮೆಟಗುಡ್ಡ, ಮಹಾಂತೇಶ ಮತ್ತಿಕೊಪ್ಪ, ಶಂಕರ ಮಾಡಲಗಿ, ನಾಗಪ್ಪ ಮೇಟಿ, ಕಾರ್ತಿಕ ಮಲ್ಲೂರ, ಭರಮನಾಯ್ಕ ಮಲ್ಲೂರು, ಚಂದ್ರು ನರಗುಂದ, ಬಾಳಪ್ಪ ನೀಲನ್ನವರ, ಸುರೇಶ ಕರಾಡೆ, ಶಿವಾನಂದ ಬೆಳಗಾವಿ, ಗ್ರಾಪಂ ಅಧ್ಯಕ್ಷ ಶಂಕರ ಬಾಗೇವಾಡಿ, ಅಕ್ಬರಸಾಬ ಲಕ್ಕುಂಡಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net