ಅರಿಯಬೇಕು ಧರ್ಮದ ತಿರುಳು

27sor1
ಜಡೆ ಗ್ರಾಮದಲ್ಲಿ ರಂಜಾನ್ ಪ್ರಯುಕ್ತ ಮುಸ್ಲಿಮರಿಗೆ ಜಡೆ ಮಠದ ಶ್ರೀ ಮಹಂತ ಸ್ವಾಮೀಜಿ ಸಿಹಿ ಹಂಚಿದರು. ಮಜರಲಿ, ಜಿಕ್ರೀಯ ಸಾಬ್, ಕಲೀಲ್ ಸಾಬ್ ಇತರರಿದ್ದರು.
Published on

ಸೊರಬ: ಸಮಾಜದಲ್ಲಿ ಪ್ರತಿಯೊಬ್ಬರೂ ಪ್ರೀತಿ, ವಿಶ್ವಾಸ, ಸೌಹಾರ್ದದಿಂದ ಧರ್ಮದ ತಿರುಳನ್ನು ಅರಿತು ಜೀವನ ನಡೆಸಿದಾಗ ಹೊಸ ಸಂದೇಶವನ್ನು ಸಮಾಜಕ್ಕೆ ನೀಡಬಹುದು ಎಂದು ಜಡೆ ಸಂಸ್ಥಾನ ಹಾಗೂ ಸೊರಬ ಮುರುಘಾಮಠದ ಶ್ರೀ ಮಹಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಜಡೆ ಗ್ರಾಮದಲ್ಲಿ ರಂಜಾನ್ ಉಪವಾಸದ ಪ್ರಯುಕ್ತ ದರ್ಗಾದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಮುಸ್ಲಿಮರಿಗೆ ಸಿಹಿ ಹಂಚಿ ಮಾತನಾಡಿದರು.
ಮುಸ್ಲಿಮರಿಗೆ ರಂಜಾನ್ ತಿಂಗಳಲ್ಲಿ ಸಿಹಿ ಹಂಚುವ ಸಂಪ್ರದಾಯ ಮುಂದುವರಿದಿದೆ. ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆಯುವ ಜತೆಗೆ ಅದರ ಸಂದೇಶವನ್ನು ಅರಿತು ಬದುಕಿದಾಗ ಸುಂದರ ಸಮಾಜ ಸಾಧ್ಯವಾಗುತ್ತದೆ. ಸಂತರು, ಋಷಿಗಳು, ಮಹಾತ್ಮರು ಶಾಂತಿ, ಸೌಹಾರ್ದದ ತತ್ವಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಅವುಗಳನ್ನು ಎಲ್ಲರೂ ಅನುಸರಿಸಿದಾಗ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು. ಮುಸ್ಲಿಂ ಸಮುದಾಯದ ಧರ್ಮಗುರು, ಸಮಾಜದ ಅಧ್ಯಕ್ಷ ಮಜರಲಿ, ಜಿಕ್ರೀಯ ಸಾಬ್, ಕಲೀಲ್ ಸಾಬ್, ತನ್ವೀರ್ ಸಾಬ್, ಅಬ್ದುಲ್ ಕರೀಂ ಸಾಬ್, ಅಬ್ದುಲ್, ಚೌಟಿ ಬಸವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net