

ಚಿಕ್ಕೋಡಿ ಗ್ರಾಮೀಣ: ನಾಟಿ ಹಾಗೂ ಬಿತ್ತನೆ ಮುನ್ನ ಬೀಜೋಪಚಾರ ಮಾಡಿದರೆ ರೋಗ ಮತ್ತು ಕೀಟಗಳಿಂದ ಸಂರಕ್ಷಣೆಯಾಗುವುದಲ್ಲದೆ ಇಳುವರಿ ಹೆಚ್ಚುತ್ತದೆ ಎಂದು ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆ ಕೃಷಿ ಅಧಿಕಾರಿ ಸಚಿನ ಮೋಪಗಾರ ಹೇಳಿದರು.
ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ಮಂಗಳವಾರ ಚಿದಾನಂದ ಬಸಪ್ರಭು ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಕೃಷಿ ವಿಭಾಗ ಮತ್ತು ಯುಪಿಎಲ್ ಕಂಪನಿ ಸಿಬ್ಬಂದಿಯಿಂದ ಹಮ್ಮಿಕೊಂಡಿದ್ದ ಬೀಜೋಪಚಾರ ತಿಳಿವಳಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಬ್ಬಿನ ಬೀಜೋಪಚಾರದಿಂದ ಉತ್ತಮವಾಗಿ ಮೊಳಕೆಯೊಡೆಯುತ್ತವೆ. ಇದು ಬೆಳೆಯ ಒಟ್ಟಾರೆ ಬೆಳವಣಿಗೆಗೆ ಸಹಕರಿಸಿ ಉತ್ತಮ ಇಳುವರಿ ನೀಡುತ್ತದೆ ಎಂದರು.
ಬೀಜೋಪಚಾರವು ರಾಸಾಯನಿಕ ಮತ್ತು ಜೈವಿಕ ವಿಧಾನ ಒಳಗೊಂಡಿದೆ. ಸಾವಯವ ಪದ್ಧತಿಯಲ್ಲಿ ಬೀಜೋಪಚಾರ ಮಾಡಿದರೆ ಮಣ್ಣಿನಿಂದ ಕಬ್ಬು ಚೆನ್ನಾಗಿ ಪೋಷಕಾಂಶ ಹೀರಿಕೊಳ್ಳುತ್ತದೆ. ಬೀಜೋಪಚಾರ ನಿರ್ವಹಣಾ ವೆಚ್ಚ ಕಡಿಮೆ ಮಾಡುತ್ತದೆ ಎಂದರು. ದೀಪಕ ಚೌಹಾಣ, ಸುಭಾಸ ಖೋತ, ಸಂಜು ಪಾಟೀಲ, ಎಸ್.ಆರ್.ಮಾನೆ, ಅನಿಲ ತೇಲಿ ಇತರರಿದ್ದರು.