

ಮೂಡಲಗಿ: ಮಕ್ಕಳಲ್ಲಿ ವ್ಯವಹಾರ ಜ್ಞಾನ ಹಾಗೂ ವ್ಯಾಪಾರ ಕೌಶಲ ವೃದ್ಧಿಸುವ ಸದುದ್ದೇಶದಿಂದ ಪಟ್ಟಣದ ಸೇಂಟ್ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ಮಿನಿ ಸಂತೆ ಹಾಗೂ ಬೆಂಕಿ ಇಲ್ಲದೆ ತಯಾರಿಸಿದ ಆಹಾರ ಮೇಳ ಗಮನ ಸೆಳೆಯಿತು.
ಪಾಲಕರು ಬೆಂಕಿ ಇಲ್ಲದೆ ತಯಾರಿಸಿದ ವಿವಿಧ ಆಹಾರ ಪದಾರ್ಥಗಳು ಹಾಗೂ ಮೆಣಸು, ಕೊತ್ತಂಬರಿ, ಹುಳಿ, ಬೆಳ್ಳುಳ್ಳಿ, ಈರುಳ್ಳಿ, ಜಿರಿಗೆ, ಮೆಂತೆ, ಕಾಳು ಮೆಣಸು, ಜ್ಯೂಸ್ ಸೇರಿ ಇತ್ಯಾದಿ ಸಾಮಗ್ರಿ ಖರೀದಿಸಿ ಸಂಭ್ರಮಿಸಿದರು.
ಆಕರ್ಷಿಸಿದ ಡಿಜಿಟಲ್ ಪಾವತಿ: ಮಿನಿ ಸಂತೆಯಲ್ಲಿ ವ್ಯಾಪರಸ್ಥರಾಗಿದ್ದ ಮಕ್ಕಳು ೆನ್ ಪೇ, ಗೂಗಲ್ ಪೇ ಸ್ಕಾೃನರ್ ಹೊಂದಿದ್ದರು. ಸಾಮಾಗ್ರಿ ಖರೀದಿಗೆ ಬಂದ ಗ್ರಾಹಕರು ಚಿಲ್ಲರೆ ಹಣ ಇಲ್ಲವೆಂದಲ್ಲಿ ಡಿಜಿಟಲ್ ಪಾವತಿ ಮಾಡುವಂತೆ ಹೇಳುತ್ತಿರುವುದು ಆಕರ್ಷಣೆಯಾಯಿತು.
ಸಿಆರ್‌ಪಿ ಸಮೀರ್ ದಬಾಡಿ ಮಾತನಾಡಿ, ಪಠ್ಯದ ಜತೆಗೆ ಬದುಕಿನ ಮಹತ್ವ ಅರಿಯಲು ಪೂರಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಪ್ರೋತ್ಸಾಹಿಸಬೇಕು. ಆರ್ಥಿಕ, ವ್ಯಾಪಾರ ವಹಿವಾಟು ಜ್ಞಾನ ಒದಗಿಸಲು ಶ್ರಮಿಸಬೇಕು ಎಂದು ತಿಳಿಸಿದರು. ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಸಂಸ್ಥೆ ಅಧ್ಯಕ್ಷ ಡ್ಯಾನಿಯಲ್ ಸರ್ವಿ, ಮುಖಂಡರಾದ ಮರೆಪ್ಪ ಮರೆಪ್ಪಗೋಳ, ಅನ್ವರ್ ನದ್ಾ ಇತರರಿದ್ದರು.