ತನಗೆ ಹೊಡೆದ ವ್ಯಕ್ತಿಗೆ ಯಾರೂ ಬುದ್ಧಿ ಹೇಳಲಿಲ್ಲವೆಂದು ವೃದ್ಧ ಆತ್ಮಹತ್ಯೆ

Boy Suside+1
Published on

ರಾಣೆಬೆನ್ನೂರ: ತನಗೆ ಹೊಡೆದ ವ್ಯಕ್ತಿಗೆ ಯಾರೂ ಬುದ್ಧಿ ಹೇಳಲಿಲ್ಲವೆಂದು ಮನನೊಂದು ವೃದ್ಧನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಟನೆ ತಾಲೂಕಿನ ಲಿಂಗದಹಳ್ಳಿಯಲ್ಲಿ ಭಾನುವಾರ ನಡೆದಿದೆ.
ಗಾಳೆಪ್ಪ ನಿಲಪ್ಪ ಪೂಜಾರ (61) ಆತ್ಮಹತ್ಯೆ ಮಾಡಿಕೊಂಡ ವೃದ್ಧ. ಅದೇ ಗ್ರಾಮದ ನಟರಾಜ ಶಂಕ್ರಪ್ಪ ದೊಡ್ಡಮನಿ (30) ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪಿ.
ನಟರಾಜ ಮದ್ಯಸೇವೆನೆ ಮಾಡಿ ನಿಂತಿದ್ದಾಗ ಗಾಳೆಪ್ಪ ಆತನಿಗೆ ಬುದ್ಧಿವಾದ ಹೇಳಲು ಹೋಗಿದ್ದಾನೆ. ಈ ಸಮಯದಲ್ಲಿ ನಟರಾಜ ಗಾಳೇಪ್ಪನನ್ನು ತಳ್ಳಿ ಕೆಳಗೆ ಕೆಡವಿದ್ದಾನೆ. ಇದರಿಂದ ಗಾಳೆಪ್ಪ ನಟರಾಜನಿಗೆ ಬುದ್ಧಿ ಹೇಳುವಂತೆ ತನ್ನ ಮಗನನ್ನು ಕರೆದಿದ್ದಾನೆ. ಆದರೆ, ಮಗ ನಟರಾಜನಿಗೆ ಬುದ್ಧಿ ಹೇಳದೆ ತಂದೆಯನ್ನು ಕರೆದುಕೊಂಡು ಹೋಗಿದ್ದಾನೆ. ಆಗ ನಟರಾಜ ನನ್ನನ್ನು ಯಾರೂ ಏನೂ ಮಾಡಿಕೊಳ್ಳಲಿಲ್ಲ ಎಂದು ಗಾಳೆಪ್ಪನ ಎದುರು ಹೇಳಿಕೊಂಡಿದ್ದಾನೆ. ಇದರಿಂದ ಮನನೊಂದ ಗಾಳೆಪ್ಪ ನನಗೆ ಹೊಡೆದವನಿಗೆ ಯಾರೂ ಏನೂ ಹೇಳಲಿಲ್ಲವೆಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಕುರಿತು ಹಲಗೇರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net