ಶುದ್ಧ ಗಾಳಿ ಪಡೆಯಲು ಮರ-ಗಿಡ ಬೆಳಸಿ

5 KURGODU 01
ಕಲ್ಲುಕಂಬದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಪರಿಸರ ದಿನದ ಪ್ರಯುಕ್ತ ಸಸಿ ನೆಡಲಾಯಿತು. ಸಂಘದ ಅಧ್ಯಕ್ಷ ನಾಗಪ್ಪ, ಸಂಘದ ಸದಸ್ಯರಾದ ಎಚ್ ಮಂಜುನಾಥ, ಗೋಸ್ಬಾಳು ಬಸಪ್ಪ, ಬಸವರಾಜ್, ಆರ್ ಪಂಪನಗೌಡ, ತಾಪಂ ಮಾಜಿ ಸದಸ್ಯ ವಿ ಬಸವರಾಜ್, ಗ್ರಾಪಂ ಸದಸ್ಯ ಅಡ್ಡೆ ಶಿವಪ್ಪ, ಸಿಬ್ಬಂದಿ ಎಚ್ ಚನ್ನಬಸಪ್ಪ, ಗಿರಿಮಲ್ಲಪ್ಪ ಇದ್ದರು.
Published on

ಕುರುಗೋಡು: ಆರೋಗ್ಯಕರ ಬದುಕಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಅಗತ್ಯವಿದ್ದು ಪ್ರತಿಯೊಬ್ಬರೂ ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗಪ್ಪ ಹೇಳಿದರು.

ತಾಲೂಕಿನ ಕಲ್ಲುಕಂಬದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಪರಿಸರ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹೆಚ್ಚುತ್ತಿರುವ ಭೂಮಿಯ ತಾಪಮಾನ ಕಡಿಮೆ ಮಾಡುವ ಜತೆಗೆ ಶುದ್ಧ ಗಾಳಿ ಪಡೆಯಲು ಪ್ರತಿಯೊಬ್ಬರೂ ಸಸಿ ನೆಡುವುದಷ್ಟೇ ಅಲ್ಲ ಉಳಿಸಿ, ಬೆಳಸಬೇಕು ಎಂದರು.

ಸಂಘದ ಸದಸ್ಯರಾದ ಎಚ್.ಮಂಜುನಾಥ, ಗೋಸ್ಬಾಳು ಬಸಪ್ಪ, ಬಸವರಾಜ, ಆರ್ ಪಂಪನಗೌಡ, ತಾಪಂ ಮಾಜಿ ಸದಸ್ಯ ವಿ ಬಸವರಾಜ, ಗ್ರಾಪಂ ಸದಸ್ಯ ಅಡ್ಡೆ ಶಿವಪ್ಪ, ಸಿಬ್ಬಂದಿ ಎಚ್ ಚನ್ನಬಸಪ್ಪ, ಗಿರಿಮಲ್ಲಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net