ರೈತರ ಬೇಡಿಕೆಗಳ ಈಡೇರಿಕೆಗೆ ಶ್ರಮ

4MNL1
Published on

ಮುನವಳ್ಳಿ: ಮಬನೂರ&ತೆಗ್ಗಿಹಾಳ ಮಡ್ಡಿ 2 ಕಿಮೀ ಉದ್ದದ ರಸ್ತೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಅನುದಾನದಡಿ 1 ಕೋಟಿ ರೂ. ಮಂಜೂರು ಮಾಡಿಸಿದ್ದು, ಈ ಭಾಗದ ರೈತರ ಬೇಡಿಕೆಗಳನ್ನು ಈಡೇರಿಸಲು ಸದಾ ಪ್ರಯತ್ನಿಸುವೆ ಎಂದು ಶಾಸಕ ವಿಶ್ವಾಸ ವೆದ್ಯ ಹೇಳಿದರು.

ಮಬನೂರ ಗ್ರಾಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್​ ಇಲಾಖೆ ಯೋಜನಯಡಿ 1 ಕೋಟಿ ರೂ.ವೆಚ್ಚದ ಸಿಸಿ ರಸ್ತೆ ಹಾಗೂ ಡಾಂಬರೀಕರಣ ರಸ್ತೆ ನಿರ್ಮಾಣದ ಕಾಮಗಾರಿಗೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಜಿಪಂ ಮಾಜಿ ಸದಸ್ಯ ಕೀರಪ್ಪ ಹದ್ದನ್ನವರ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಗ್ರಾಪಂ ಅಧ್ಯೆ ನಿಂಗವ್ವ ಮೇಟಿ, ಉಪಾಧ್ಯೆ ಯಲ್ಲವ್ವ ತಳವಾರ, ಸದಸ್ಯರಾದ ಯಲ್ಲಪ್ಪ ನರಿ, ಪಡೆಪ್ಪ ನರಿ, ವಿಠ್ಠಲ ಅಗಸಿಮನಿ, ಮಹಾದೇವ ಪಟಾತ, ಸೋಮವ್ವ ಮಾದರ, ಬಸವ್ವ ಹಡಪದ, ಆರ್​.ಕೆ.ಪಟಾತ, ಉದಯ ನರಿ, ತಾಪಂ ಇಒ ವಿಜಯಕುಮಾರ ಎಸ್​., ಬಿ.ಎಂ.ಅಂಗಡಿ, ಪಿಡಿಒ ಆರ್​.ಎಸ್​.ಚಿಪ್ಪಲಕಟ್ಟಿ, ರಾಮಕೃಷ್ಣ ಅಗಸಿಮನಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net