ಶಾಂತಿ ನೆಲೆಸಲು ಗುರುವಿನ ಮಾರ್ಗದರ್ಶನ ಅವಶ್ಯ

Kudlgi Gurupoornima
ಕೂಡ್ಲಿಗಿ ಹಿರೇಮಠ ಸಂಸ್ಥಾನದಲ್ಲಿ ಭಾನುವಾರ ಬಿಜೆಪಿ ಮಂಡಲದಿಂದ ಪ್ರಶಾಂತ ಸಾಗರ ಶಿವಾಚಾರ್ಯರಿಗೆ ಗುರುವಂದನೆ ಸಲ್ಲಿಸಲಾಯಿತು. ಬಿಜೆಪಿ ಮಂಡಲ ಅಧ್ಯಕ್ಷ ಕಾಮಶೆಟ್ಟಿ ನಾಗರಾಜ, ಪ್ರಧಾನ ಕಾರ್ಯದರ್ಶಿ ಪಿ.ಮಂಜುನಾಥ ನಾಯಕ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ತಾಲೂಕು ಅಧ್ಯಕ್ಷ ಗುರಿಕಾರ ರಾಘವೇಂದ್ರ, ಎಲ್.ಪವಿತ್ರಾ ಇತರರಿದ್ದರು.
Published on

ಕೂಡ್ಲಿಗಿ: ಮನುಷ್ಯನ ಪ್ರತಿ ಹಂತದಲ್ಲಿಯೂ ಗುರುವಿನ ಮಾರ್ಗದರ್ಶನ ಅವಶ್ಯವಾಗಿದೆ ಎಂದು ಕೂಡ್ಲಿಗಿ ಹಿರೇಮಠದ ಪ್ರಶಾಂತ ಸಾಗರ ಶಿವಾಚಾರ್ಯರು ಹೇಳಿದರು.

ಗುರುಪೂರ್ಣಿಮೆ ಅಂಗವಾಗಿ ಪಟ್ಟಣದ ಹಿರೇಮಠ ಸಂಸ್ಥಾನ ಪೀಠದಲ್ಲಿ ಭಾನುವಾರ ಬಿಜೆಪಿ ಮಂಡಲ ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಆರ್ಶಿವಚನ ನೀಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ವಿಶೇಷ ಸ್ಥಾನವಿದೆ. ಅದರಂತೆ ಗುರು ಸಹ ಕತ್ತಲಿನಿಂದ ಬೆಳಕಿನಡೆಗೆ ಗುರು ಕಾರುಣ್ಯವನ್ನು ಶಿಷ್ಯ ಬಳಗಕ್ಕೆ ತೋರಿಸಿ ಸಂಸ್ಕಾರ ಹಾಗೂ ಧರ್ಮ ಸಾಕ್ಷಾತ್ಕಾರ ನೀಡಿರುವುದನ್ನು ಕೇಳಿದ್ದೇವೆ.ಸನಾತನ ಸಂಸ್ಕೃತಿಯಲ್ಲಿ ಗುರುವಿನ ಶಕ್ತಿ ಅರಿತು ಗೌರವಿಸಿದ್ದೇವೆ.

ಆದರೆ ಬದಲಾದ ಜಾಗತೀಕರಣದ ಭರಾಟೆಯಲ್ಲಿ ಗುರು ಹಾಗೂ ಶಿಷ್ಯರ ಬಾಂಧವ್ಯ ಮರೆತ ಕಾರಣ ಸಮಾಜದಲ್ಲಿ ಅನಾಚಾರ, ಅಹಿಂಸೆ,ಅತ್ಯಾಚಾರಗಳು ವಿಜೃಂಭಿಸುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಸಮಾಜದಲ್ಲಿ ಶಾಂತಿ ನೆಲೆಸಬೇಕಾದರೆ ಗುರುವಿನ ಸನ್ಮಾರ್ಗ ಹಾಗೂ ಮಾರ್ಗದರ್ಶನ ಅವಶ್ಯ ಎಂದು ತಿಳಿಸಿದರು.

ಬಿಜೆಪಿ ಮಂಡಲ ಅಧ್ಯಕ್ಷ ಕಾಮಶೆಟ್ಟಿ ನಾಗರಾಜ, ಪ್ರಧಾನ ಕಾರ್ಯದರ್ಶಿ ಪಿ. ಮಂಜುನಾಥ ನಾಯಕ, ಎಸ್ಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ತಾಲೂಕು ಅಧ್ಯಕ್ಷ ಗುರಿಕಾರ ರಾಘವೇಂದ್ರ, ಕಾರ್ಯದರ್ಶಿ ಎಲ್.ಪವಿತ್ರಾ, ಪ್ರಮುಖರಾದ ಎ.ಎಂ.ವಾಗೀಶ್ ಮೂರ್ತಿ, ಜೂಗಲ್ ಭರತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net