ಜಾತ್ರೆಗೆ ಮೆರುಗು ತಂದ ಶರ್ಯತ್ತು

17Ainapur1
Published on

ಐನಾಪುರ: ಗ್ರಾಮೀಣ ಆಟೋಟಗಳು ದೇಶದ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ತೋರಿಸುತ್ತವೆ ಎಂದು ಜಾತ್ರಾ ಕಮಿಟಿ ಉಪಾಧ್ಯಕ್ಷ ಹರ್ಷವರ್ಧನ ಪಾಟೀಲ ಹೇಳಿದರು.

ಪಟ್ಟಣದ ಶ್ರೀ ಸಿದ್ಧೇಶ್ವರ ದೇವರ 55ನೇ ಜಾತ್ರಾ ಮಹೋತ್ಸವದ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಒಂದು ಕುದುರೆ, ಒಂದು ಎತ್ತು ಗಾಡಿ ಶರ್ಯತ್ತು ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಂದು ಕುದುರೆ ಒಂದು ಎತ್ತು ಗಾಡಿ ಶರ್ಯತ್ತಿನಲ್ಲಿ ಮಹಾರಾಷ್ಟ್ರದ ನರವಾಡ ಗ್ರಾಮದ ಸಚಿನ ಕಟೀಕರ ಪ್ರಥಮ, ಅಥಣಿ ತಾಲೂಕಿನ ಅಬ್ಬಿಹಾಳ ಗ್ರಾಮದ ಸಿದ್ದು ಸಲಗರೆ ದ್ವಿತೀಯ, ಕೊಲ್ಲಾಪುರದ ಗೊಲ್ಯಾ ಪಾಟೀಲ ತೃತೀಯ ಸ್ಥಾನ ಪಡೆದರು.

ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷಗೌಡ ಪಾಟೀಲ, ಉಪಾಧ್ಯಕ್ಷ ರಾಜುಗೌಡ ಪಾಟೀಲ, ಸುರೇಶ ಅಡಿಶೇರಿ, ಅಮಗೊಂಡ ಒಡೆಯರ, ಸಮೀರ್ ಕುಚನೂರೆ, ಸಂಜು ಕುಸನಾಳೆ, ಪ್ರಮೋದ ಲಿಂಬಿಕಾಯಿ, ಅಭಯಕುಮಾರ ಬಣಜವಾಡ, ಪ್ರದೀಪ ಲಿಂಬಿಕಾಯಿ, ರಾಹುಲ ಬಣಜವಾಡ, ಸುಭಾಷ ಜೋಷಿ, ಭರತೇಶ ತೆರದಾಳೆ, ಸಂದೀಪ ಮಾನಗಾಂವೆ, ದಾದಾ ಜೆಂತೆನ್ನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net