ದೊಡವಾಡಕ್ಕೆ ದಿಂಡಿ ಪಾದಯಾತ್ರೆ ಇಂದು

26blh2 madhavanand prabhuji
Published on

ಬೆಲಹೊಂಗಲ: ಸುೇತ್ರ ಇಂಚಗೇರಿಯ ಸದ್ಗುರು ಸಮರ್ಥ ಮಾಧವಾನಂದ ಪ್ರಭುಜಿಯವರ ಪುಣ್ಯ ಸಪ್ತಾಹದ ನಿಮಿತ್ತ ಪ್ರತಿ ವರ್ಷ ಹಮ್ಮಿಕೊಳ್ಳಲಾಗುವ ದಿಂಡಿ ಪಲ್ಲಕ್ಕಿ ಪಾದಯಾತ್ರೆಯು ಮೇ 27ರಂದು ದೊಡವಾಡ ಗ್ರಾಮಕ್ಕೆ ಆಗಮಿಸಲಿದೆ. ಮೇ 25ರಂದು ಹುಬ್ಬಳ್ಳಿ ವಿದ್ಯಾನಗರದ ಗಿರೀಶ ಆಶ್ರಮದಿಂದ ವೀಣಾ ಪೂಜೆಯೊಂದಿಗೆ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರು ಪಾದಯಾತ್ರೆಗೆ ಚಾಲನೆ ನೀಡಿದ್ದು, ದೊಡವಾಡ ಗ್ರಾಮಕ್ಕೆ ಆಗಮಿಸಿದ ಬಳಿಕ ಇಲ್ಲಿನ ಕೊಪ್ಪದ ಬಿಸಿಯ ಗಿರೀಶ ಆಶ್ರಮದಲ್ಲಿ ನಿತ್ಯ ನಿಯಮ, ಉಪಾಸನೆ ಪುರಾಣ, ಪ್ರವಚನ, ಭಜನೆ ಹಾಗೂ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಮಹಾಪ್ರಸಾದ ಸೇವೆ ಇರಲಿದೆ ಎಂದು ಆಯೋಜಕ ಗಿರಿಮಲ್ಲಪ್ಪ ಬೆಳವಡಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net