ವಿವಾದಕ್ಕೆ ಮಣಗುತ್ತಿ ಗ್ರಾಮಸ್ಥರ ಮಂಗಳ

0101
Published on

ಉಳ್ಳಾಗಡ್ಡಿ-ಖಾನಾಪುರ: ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಪ್ರತಿಷ್ಠಾಪನೆ ವಿಷಯಕ್ಕೆ ಸಂಬಂಧಿಸಿದಂತೆ ಭುಗಿಲೆದ್ದಿದ್ದ ವಿವಾದಕ್ಕೆ ಮಂಗಳವಾರ ಗ್ರಾಮಸ್ಥರೇ ಮಂಗಳ ಹಾಡಿದ್ದಾರೆ.

ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮೂರು ಗ್ರಾಮಗಳ ಮುಖಂಡರು, ಸಮುದಾಯದ ಜನ ಹಾಗೂ ಸಂಘಟನೆಗಳ ಯುವಕರು ಮಂಗಳವಾರ ಬೆಳಗ್ಗೆ 11 ಗಂಟೆಯಿಂದ 3 ಹಂತದ ಸಭೆ ನಡೆಸಿ ಒಮ್ಮತದ ನಿರ್ಣಯಕ್ಕೆ ಬಂದಿದ್ದಾರೆ. ಗ್ರಾಮದ ಬಸವೇಶ್ವರ ಮಂದಿರದ ಹತ್ತಿರ ಇರುವ ಲಕ್ಷ್ಮೀ ದೇವಿ ಟ್ರಸ್ಟ್ ಕಮಿಟಿ ಜಾಗದಲ್ಲಿ ವಿಶ್ವಗುರು ಬಸವೇಶ್ವರ, ಶಿವಾಜಿ ಮಹಾರಾಜರು, ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಮಹರ್ಷಿ ವಾಲ್ಮೀಕಿ, ಶ್ರೀಕೃಷ್ಣ ಪ್ರತಿಮೆ ಶೀಘ್ರ ಸ್ಥಾಪಿಸಲು ನಿರ್ಧರಿಸಲಾಯಿತು. ಈ ಬಗ್ಗೆ ಮೂರು ಗ್ರಾಮದ ಎಲ್ಲ ಸಮುದಾಯದವರು ಯಾವುದೇ ಮನಸ್ತಾಪವಿಲ್ಲದೆ ನಿರ್ಣಯಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ.

ಸಭೆ ನಡೆದ ಬಳಿಕ ಸಂಜೆ 5 ಗಂಟೆಗೆ ಪಂಚ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಎಲ್ಲರ ಸಮ್ಮುಖದಲ್ಲಿ ಸರಳವಾಗಿ ಭೂಮಿಪೂಜೆ ನೆರವೇರಿಸಲಾಯಿತು. ಶರದ ಪಾಟೀಲ, ರಮೇಶ ಪಾಟೀಲ, ರವಿಂದ್ರ ಕುರಾಡೆ, ಬಸವರಾಜ ಧರನಟ್ಟಿ, ರವೀಂದ್ರ ಪಾಟೀಲ, ವಿಠ್ಠಲ ಉಕ್ಕೋಜಿ, ಸುನೀಲ ಹುಕ್ಕೇರಿ, ಶಿವಾನಂದ ರಾಠೋಡ, ಅರ್ಜುನ ಘಸ್ತಿ, ಆರ್.ಕೆ. ದೇಸಾಯಿ, ಕಿರಣ ರಜಪೂತ, ಹುಕ್ಕೇರಿ ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಪಿಎಸ್‌ಐ ರಮೇಶ ಪಾಟೀಲ, ಮಹಾನಿಂಗ ಶಿವನಾಯಿಕ, ಅಪ್ಪಣ್ಣ ಮಗದುಮ್ಮ, ಶಶಿಕಾಂತ ಸ್ವಾವಣ್ಣವರ, ಮಲ್ಲಿಕಾರ್ಜುನ ಶಿವನಾಯಿಕ, ರಮೇಶ ಗುಜನಾಳಿ, ಕುಮಾರ ಹತ್ತರಗಿ, ಬಸವಣ್ಣಿ ಬೊಜಪ್ಪಗೋಳ, ಕಾಡೇಶ ಮೇಕಳಿ, ರಮೇಶ ಸಣ್ಣಪ್ಪಗೋಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net