ಜನರ ಚದುರಿಸಲು ಲಾಠಿ ಏಟು ತಪ್ಪು

web2
ಬೈಲಹೊಂಗಲದಲ್ಲಿ ನಡೆದ ಪ್ರತಿಭಟನೆ ವೇಳೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಮಾತನಾಡಿದರು. ಶ್ರೀಶೈಲ ಬೋಳನ್ನವರ, ಎಂ.ಆರ್.ಮೆಳವಂಕಿ ಇತರರು ಇದ್ದರು
Published on

ಬೈಲಹೊಂಗಲ: ಪಂಚಮಸಾಲಿ ಸಮುದಾಯ 2ಎ ಮೀಸಲಾತಿಗಾಗಿ ಆಗ್ರಹಿಸಿ ಶಾಂತಿಯುತ ಹೋರಾಟ ಮಾಡುತ್ತಿದ್ದಾಗ ಪ್ರತಿಭಟನಾಕಾರರ ಮೇಲೆ ಎಡಿಜಿಪಿ ಹಿತೇಂದ್ರ ಅವರು ಗುಂಪು ಚದುರಿಸಲು ಲಾಠಿಚಾರ್ಜ್ ನಡೆಸಿದ್ದು ತಪ್ಪು ಎಂದು ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವತ್ತದಲ್ಲಿ ಗುರುವಾರ ಪಂಚಮಸಾಲಿಗರು ಹಮ್ಮಿಕೊಂಡಿದ್ದ ರಸ್ತೆ ಸಂಚಾರ ತಡೆ ಸಂದರ್ಭದಲ್ಲಿ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ಪೂಜ್ಯ ಬಸವಜಯ ಮತ್ಯುಂಜಯ ಸ್ವಾಮೀಜಿ ನೇತತ್ವದ ಚಳುವಳಿಗಾರರ ಮೇಲೆ ಲಾಠಿಚಾರ್ಜ್ ನಡೆಸಿದ್ದು ಅಕ್ಷ್ಯಮ್ಯ. ಎಡಿಜಿಪಿ ಹಿತೇಂದ್ರ ಹಾಗೂ ಪೊಲೀಸರನ್ನು ಕೂಡಲೇ ಸೇವೆಯಿಂದ ವಜಾ ಮಾಡಬೇಕು. ಸಿದ್ದರಾಮಯ್ಯ ಕೂಡಲೇ ಪೂಜ್ಯರು, ಸಮುದಾಯದವರಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ತಾಲೂಕು ಘಟಕ ಅಧ್ಯಕ್ಷ ಶ್ರೀಶೈಲ ಬೋಳನ್ನವರ, ವಕೀಲರ ಸಂಘದ ಅಧ್ಯಕ್ಷ ಎಂ.ಆರ್. ಮೆಳವಂಕಿ ಮಾತನಾಡಿ, ಮುಖ್ಯಮಂತ್ರಿಗಳು ಮನವಿ ಸ್ವೀಕರಿಸದೆ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ರಾಜ್ಯದಲ್ಲಿ ಮತ್ತೊಂದು ಕ್ರಾಂತಿ ಆಗುವುದಕ್ಕಿಂತ ಮುಂಚೆ ಸಿದ್ದರಾಮಯ್ಯ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಸಿಬ್ಬಂದಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು. ಮುಖಂಡರಾದ ಎ.ಎಂ. ಸಿದ್ರಾಮನಿ, ಎಂ.ವೈ.ಸೋಮನ್ನವರ, ಎಸ್.ಎಂ.ಅಬ್ಬಾಯಿ, ಎ್.ಎಸ್. ಸಿದ್ಧನಗೌಡರ, ಬಿ.ಬಿ. ಗಣಾಚಾರಿ, ಮಹಾಂತೇಶ ಕಮತ, ಶಂಕರ ಮಾಡಲಗಿ, ಸೋಮಲಿಂಗ ಮೆಳ್ಳಿಕೇರಿ, ರುದ್ರಪ್ಪ ಹೊಸಮನಿ, ವೀರೇಶ ಹಲಕಿ, ಶ್ರೀಕಾಂತ ಶಿರಹಟ್ಟಿ, ಬಾಳನಗೌಡ ಪಾಟೀಲ, ಬಸವರಾಜ ಬಾಳೇಕುಂದರಗಿ, ಪುರಸಭೆ ಅಧ್ಯಕ್ಷ ವಿಜಯ ಬೋಳನ್ನವರ, ಮಹೇಶ ಹರಕುಣಿ, ಮಡಿವಾಳಪ್ಪ ಹೋಟಿ, ಮುರಗೆಪ್ಪ ಗುಂಡ್ಲೂರ, ರಾಜು ಕುಡಸೋಮನ್ನವರ, ಶಿವಾನಂದ ಬಡ್ಡಿಮನಿ, ಬಸನಗೌಡ ಪಾಟೀಲ ಇತರರರಿದ್ದರು.

ಸಿಎಂ ಪ್ರತಿಕೃತಿ ದಹನಕ್ಕೆ ತಡೆ: ಪ್ರತಿಭಟನಾಕಾರರು ಸಿದ್ಧರಾಮಯ್ಯ ಪ್ರತಿಕತಿ ದಹನಕ್ಕೆ ಮುಂದಾದಾಗ ಪೊಲೀಸರು ತಡೆದು ವಶಕ್ಕೆ ಪಡೆದರು. ವಕೀಲರ ಸಂಘ ನ್ಯಾಯಾಲಯ ಕಲಾಪ ಬಹಿಷ್ಕರಿಸಿ ಬೆಂಬಲ ಸೂಚಿಸಿತು. ತಾಲೂಕಿನ ಮಲ್ಲಮ್ಮನ ಬೆಳವಡಿಯಲ್ಲಿ ಗ್ರಾಮದ ಮಲ್ಲಮ್ಮ ವತ್ತದಲ್ಲಿ ರಸ್ತೆ ಸಂಚಾರ ತಡೆದು ಪಂಚಮಸಾಲಿಗರು ಪ್ರತಿಭಟನೆ ನಡೆಸಿದರು. ಜಿಪಂ ಮಾಜಿ ಸದಸ್ಯ ಈರಣ್ಣ ಕರೀಕಟ್ಟಿ, ಅಮಿತ ವಿಶ್ವನಾಥ ಪಾಟೀಲ, ಪ್ರಕಾಶ ಬಳಿಗಾರ, ಡಿ.ಜಿ. ದೇಗಾಂವಿ, ಪ್ರಕಾಶ ಹುಂಬಿ, ಕೀರ ಕಡಕೋಳ, ನಾಗಪ್ಪ ಕಿರಕಸಾಲಿ, ಸುನೀಲ ವರ್ನೇಕರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net